ರಾಮಾಯಣದ ಮೊದಲ ಭಾಗದಲ್ಲಿ ರಾಮ -ರಾವಣ ಮುಖಾಮುಖಿ ಇಲ್ಲ!
ನಿರ್ದೇಶಕ ನಿತೇಶ್ ತಿವಾರಿ ಅವ್ರ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ರಾಮಾಯಣ’ ವು ಒಂದು. ಸಿನಿಮಾ ಪ್ರಚಾರ ಪ್ರಾರಂಭವಾಗುವ ಮೊದಲೇ ಸಿನಿಮಾದ ಕಾಸ್ಟಿಂಗ್ ಬಗ್ಗೆ ಸದ್ದು ಮಾಡುತ್ತಿದ ಸಿನಿಮಾ ಕೆಲವು ದಿನಗಳಿಂದ ಪ್ರಚಾರಕ್ಕೆ ಇಳಿದಿದೆ.
ಇದೀಗ ಸಿನಿಮಾದ ಪ್ರಚಾರವನ್ನು ತಂಡ ಹಾಲಿವುಡ್ ಇಂದಾನೆ ಶುರು ಮಾಡಿಕೊಂಡಿದೆ. ಏಪ್ರಿಲ್ 13 ಯಿಂದ ಲಾಸ್ ವೇಗಸ್ ನಲ್ಲಿ ವಿಶ್ವದ ಅತಿ ದೊಡ್ಡ ಸಿನಿಮಾ ಸಮಾವೇಶಗಳಲ್ಲಿ ಒಂದಾದ ಸಿನಿಮಾಕಾನ್ -2026 ಶುರುವಾಗಿದೆ.ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಯಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರ ಹಾಲಿವುಡ್ ನ ಅನೇಕ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿರುವ ಯಶ್ ತಮ್ಮ ಹಾಗೂ ರಣಬೀರ್ ಕಪೂರ್ ಕಾಂಬೊ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ರಾಮಾಯಣದ ಮೊದಲ ಭಾಗದಲ್ಲಿ ರಾಮ- ರಾವಣನ ಮುಖಾಮುಖಿ ಇಲ್ಲ!
ಹಾಲಿವುಡ್ ನ ಖಾಸಗಿ ಯೌಟ್ಯೂಬ್ ಚಾನಲ್ ನಲ್ಲಿ “ತಾನು ಹಾಗೂ ರಣಬೀರ್ ಈ ಸಿನಿಮಾದ ಮೊದಲ ಭಾಗದಲ್ಲಿ ಎಲ್ಲೂ ಮುಖಾಮುಖಿಯಾಗಿಲ್ಲ.ರಾಮಾಣ ದ ಎರಡು ಭಾಗಗಳಲ್ಲಿ ಮೊದಲ ಭಾಗದಲ್ಲಿ ರಾವಣನಾಗಿರುವ ನನಗೆ ತನ್ನದೇ ಆದ ಸಾಮ್ರಾಜ್ಯವಿದ್ದರೆ, ರಾಮನಾಗಿರುವ ರಣಬೀರ್ ಕಪೂರ್ ಗೆ ಅವರದ್ದೇ ಸಾಮ್ರಾಜ್ಯವಿದೆ” ಎಂದು ಹಂಚಿಕೊಂಡಿದ್ದಾರೆ.ಈ ಮೂಲಕ ಈ ವರ್ಷ ಬಿಡುಗಡೆಯಾಗುವ ಮೊದಲ ಭಾಗದಲ್ಲಿ ರಾಮ – ರಾವಣನ ಭೇಟಿಯೇ ಇಲ್ಲ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.