ಅಣ್ಣಾವ್ರ ನೆನೆದು ಭಾವುಕರಾದ ಜಗ್ಗೇಶ್
ನಿನ್ನೆ ವರನಟ ಡಾ. ರಾಜ್ ಕುಮಾರ್ ಅವರ ನಮ್ಮನ್ನಗಲಿ 20 ವರ್ಷ. ಈ ಸಂಧರ್ಭದಲ್ಲಿ ಜಗ್ಗೇಶ್ ಅವ್ರು “ಇಂದು ನಮ್ಮ ದೇವರು ದೇವರಾಗಿ ದೇವರ ಜತೆಗೆ ದೇವರ ಪೂಜೆಗೆ ಮೋಡದ ಮರೆಯಲ್ಲಿ ಮರೆಯಾದ ದಿನ. ಹಾಗೇ ದೇವರು ವಾಸವಿದ್ದ ಮನೆಯ ರಸ್ತೆಯಲ್ಲಿ ಇಂದು ಹೋಗಿ ಬಂದೆ” ಎಂದು ಬರೆದುಕೊಂಡಿದ್ದಾರೆ ಇದರ ಜೊತೆಗೆ ಒಂದು ಸಣ್ಣ ಘಟನೆಯನ್ನೂ ಹಂಚಿಕೊಂಡಿದ್ದಾರೆ.
“ಮಿಮಿಕ್ರಿ ಚೆನ್ನಾಗಿತ್ತು ” ಅಂದ ಅಣ್ಣಾವ್ರು

ಯಸ್ ಅವರು ತಮ್ಮ ಪೋಸ್ಟ್ ಕ್ಯಾಪ್ಶನ್ ನಲ್ಲಿ ಒಂದು ದಿನ ಸಂಜೆ ಸಿಗರೇಟ್ ಸೇದುತಿದ್ದರಂತೆ ಆಗ ಅಣ್ಣಾವ್ರ ಸಹಾಯಕ ಚನ್ನ ಅವ್ರ ಬಳಿ ರಾಜ್ ಕುಮಾರ್ ಅವರ ಧ್ವನಿಯಲ್ಲಿ ‘ ಏನು ಚನ್ನಪ್ಪನವರೇ ಒಬ್ಬರೇ. ಎಲ್ಲಿ ನಮ್ಮ ದೇವರು? ಎಂದರಂತೆ ಆಗ ಅಣ್ಣಾವ್ರು ಇಲ್ಲೆ ಇಲ್ಲೆ ನಾನಿಲ್ಲೆ ಎಂದು ಹೇಳುತ್ತಾ ಮಿಮಿಕ್ರಿ ಚೆನ್ನಾಗಿತ್ತು ಎಂದು ಹೇಳಿದ್ದರು ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.