ದೇವರನ್ನ ಪ್ರಶ್ನಿಸಿದ ದಿಲೀಪ್ ರಾಜ್ ಪತ್ನಿ…!
ನಟ, ನಿರ್ಮಾಪಕ ಮತ್ತು ನಿರ್ದೇಶಕ ದಿಲೀಪ್ ರಾಜ್ ಅವರ ಅಕಾಲಿಕ ಅಗಲಿಕೆಗೆ ಇಡೀ ಚಂದನವನ ಕಂಬನಿ ಇಟ್ಟಿತ್ತು. ಅನೇಕ ಪ್ರತಿಭಾನ್ವಿತ ಕಲಾವಿದರನ್ನು ಕನ್ನಡಿಗರಿಗೆ ಪರಿಚಯಿಯಿಸಿದವರು.ಇದೀಗ ದಿಲೀಪ್ ಅವರ ಪತ್ನಿ ಶ್ರೀ ವಿದ್ಯಾ ರಾಜ್ ಅವರು ದೇವರ ನಡೆಯನ್ನ ಪ್ರಶ್ನಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ.
“ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ – ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೂಷಿಸುತ್ತಾ ಇರಬೇಕು.
ಮಕ್ಕಳು ತಂದೆ -ತಾಯಿಯನ್ನು ಗೌರವಿಸಬಾರದು. ತಂದೆ – ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು.ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ ಅನ್ನೋದೇ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೆ ಇರಬೇಕು.
ಯಾಕೆಂದರೆ ದೇವರಿದ್ದಾನೆ, ಹುಷಾರಾಗಿರಿ. ಯಾರ ಮನೆ ಚೆನ್ನಾಗಿದೆ,ಯಾರ ಮನೆಯಲ್ಲಿ ಯಾವಾಗಲು ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತಿರ್ತಾರೋ- ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ. ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ” ಎಂದು ಬರೆದು ದೇವರನ್ನು ಧೂಷಿಸಿದ್ದಾರೆ.