ಬಲರಾಮನ ದಿನಗಳಿಗೆ ‘ALL OK’ ಬಲ…!
ಕೆ. ಎಂ ಚೈತನ್ಯ ಅವರು ನಿರ್ದೇಶನ ಮಾಡಿರುವ ವಿನೋದ್ ಪ್ರಭಾಕರ್ ಹಾಗೂ ಪ್ರಿಯಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ‘ಬಲರಾಮನ ದಿನಗಳು’ ಈಗಾಗಲೇ ಸಿನಿಮಾವು ತನ್ನ ಹಾಡು, ತುಣುಕುಗಳಿಂದ ಸದ್ದು ಮಾಡುತ್ತಿದ್ದು, ಇದೀಗ ಹೊಸ ಹಾಡೊಂದನ್ನ ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದೆ.
ಯಸ್, ಬಲರಾಮನ ದಿನಗಳು ಸಿನಿಮಾದ ಶುರು ಶುರು ರೊಮ್ಯಾಂಟಿಕ್ ಸಾಂಗ್, ಇತ್ತೀಚೆಗೆ ಬಿಡುಗಡೆಯಾದ ಕ್ವಾಟ್ರು ಸಾಂಗ್ ಗಳು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಸಾಲಿಗೆ ಸಿನಿಮಾದ 4ನೇ ಹಾಡು ಸೇರಿದೆ. ‘ಯಾರಿಲ್ಲ ಯಾರಿಲ್ಲ’ ಸಾಂಗ್ ನಿನ್ನೆ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡ್ತಿದೆ.ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸಂಗೀತದಲ್ಲಿ ALL OK ಹಾಡಿದ್ದಾರೆ.
ದಾರಿ ತಪ್ಪಿದ ಮಗನಾಗಿದ್ದೆ…!
ಈ ಹಾಡಿನ ಲಾಂಚ್ ಇವೆಂಟ್ನಲ್ಲಿ ಮಾತನಾಡಿದ ಸಿನಿಮಾದ ನಾಯಕ ವಿನೋದ್ ಪ್ರಭಾಕರ್ ಅವರು, ನಾನು ಟೈಗರ್ ಪ್ರಭಾಕರ್ ಅವ್ರು ಬಿಟ್ಟೋದ ಅಧ್ಯಾಯ. ಚಿತ್ರರಂಗದಲ್ಲಿ ಬಹಳಷ್ಟು ಕನಸನ್ನ ಕಂಡಿದ್ರು.ಆದ್ರೆ ನಾನು ಚಿತ್ರರಂಗಕ್ಕೆ ಬಂದಾಗ ಎಡವಿದೆ ಒಂದು ರೀತಿ ದಾರಿ ತಪ್ಪಿದ ಮಗನಾಗಿದ್ದೆ. ಆದ್ರೆ ಈಗ ಯು ಟರ್ನ್ ತೆಗೊಂಡಿದೀನಿ ಎಂದು ಹೇಳಿದರು.
ಇನ್ನೇನು ಇದೇ ತಿಂಗಳ ಜೂ.26ರಂದು ತೆರೆ ಮೇಲೆ ಅಪ್ಪಳಿಸಲು ರೆಡಿಯಾಗಿ ನಿಂತಿರುವ ಈ ಸಿನಿಮಾ, ಪಕ್ಕ ಗ್ಯಾಂಗ್ ಸ್ಟಾರ್ ಸಿನಿಮಾ ಆಗಿದ್ದು ಸಿನಿಮಾ ಪ್ರಿಯರು ಕಾತುರತೆಯಿಂದ ಎದುರು ನೋಡುತ್ತಿದ್ದಾರೆ.