ಲವ್ ಕೇಸ್ ಕುಂಬಳಕಾಯಿ ಚಿತ್ರೀಕರಣ ಮುಗಿಸಿದ ‘ಲವ್ ಕೇಸ್ ‘
ಜೈಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನ ಎಂ.ಬಿ ಕ್ರಿಯೇಷನ್ಸ್ ಮೋಹನ್ ಬಾಬು ನಿರ್ಮಾಪಣೆ ಮಾಡುತ್ತಿದ್ದಾರೆ . ಸೆಟ್ಟೇರಿನಿಂದ ಹಿಡಿದು ಇಲ್ಲಿಯವರೆಗೂ ಸದ್ದು ಮಾಡುತ್ತಿರುವ ಈ ಸಿನಿಮಾದ ಕೊನೆಯ ದಿನದ ಚಿತ್ರೀಕರಣ ನಾಗರಭಾವಿಯ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಕ್ತಾಯಗೊಂಡಿದ್ದು, ಸಿನಿಮಾ ತಂಡ ಕುಂಬಳಕಾಯಿ ಹೊಡೆದು ಚಿತ್ರೀಕರಣಕ್ಕೆ ಶುಭಂ ಹಾಡಿದೆ.
ಶ್ರೀನಗರ ಕಿಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಾಗಭೂಷಣ್ ,ಮಹಾನಟಿ ಸೀಸನ್ 2 ರ ವಿನ್ನರ್ ವಂಶಿ, ಸ.ಹಿ.ಪ್ರಾ. ಶಾಲೆ ಕಾಸರಗೂಡು ಹಾಗೂ ಕಾಂತಾರ ಚಿತ್ರದ ಮೂಲಕ ಜನರ ಮನಸ್ಸು ಗೆದ್ದಿದ್ದ ರಂಜನ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಆದಿ ಹರಿಕೃಷ್ಣ ಅವರ ಸಂಗೀತ ಹಾಗೂ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ , ಅನುಕೃಷ್ಣ ಸಂಕಲನವಿರೋ ಈ ಚಿತ್ರವು ಒಂದೊಳ್ಳೆ ವಿಷ್ಯದ ಮೂಲಕ ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಆಗುತ್ತಿದ್ದು ,ಇನ್ನೇನು ಸದ್ಯದಲ್ಲೇ ಸಿನಿಮಾದ ಟೀಸರ್ ಹಾಗೂ ಹಾಡುಗಳನ್ನ ಸಿನಿಮಾ ತಂಡ ರಿಲೀಸ್ ಮಾಡುವ ಆಲೋಚನೆಯಲ್ಲಿದೆ.