ಬಿಡುಗಡೆಗು ಮೊದಲೇ ಇತಿಹಾಸ ಸೃಷ್ಟಿಸಿದ ಟಾಕ್ಸಿಕ್…!
‘ಟಾಕ್ಸಿಕ್’ ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ನಿರೀಕ್ಷೆಯನ್ನ ಹೆಚ್ಚು ಮಾಡಿದೆ. ಯಶ್ ಅವರ 3 ಶೇಡ್ ಜೊತೆಗೆ ಎಲ್ಲಾ ಕಲಾವಿದರ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಆಗಸ್ಟ್ 26 ಕ್ಕೆ ರಿಲೀಸ್ ಆಗಲು ಸಜ್ಜಾಗಿರುವ ಟಾಕ್ಸಿಕ್ ದಿನೇ ದಿನೇ ದಾಖಲೆ ಮಾಡುತ್ತಿದೆ
ಆರು ಭಾಷೆಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ವಿಶಾಲ ‘ಅಮೇರಿಕಾ’ ದಾದ್ಯಂತ ಸುಮಾರು 2000+ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗ್ತಿದೆ.
ಇತಿಹಾಸದಲ್ಲೇ ಭಾರತೀಯ ಚಲನಚಿತ್ರವೊಂದು ಅಮೇರಿಕಾ ದೇಶದಲ್ಲಿ ಇಷ್ಟು ತೆರೆಗಳಲ್ಲಿ ಬಿಡುಗಡೆಯಾಗ್ತಿರೋದು ಇದೇ ಮೊದಲು ಮತ್ತು ದಾಖಲೆ
ಉತ್ತರ ಅಮೇರಿಕಾದಲ್ಲಿ 38ಸಾವಿರ ಯು ಎಸ್ ಡಾಲರ್ಸ್ ಅಷ್ಟು ಟಿಕೆಟ್ಸ್ ,ಆಡ್ವಾನ್ಸಡ್ ಸೇಲ್ಸ್ ಆಗಿದೆ ಎಂದು ವರದಿಯಾಗಿದೆ..
ಸಿನ್ಮಾ ರಿಲೀಸ್ಗೂ 15ದಿನ ಮೊದ್ಲೇ ಈ ಕ್ರೇಜ್ ನೋಡ್ತಿದ್ರೆ ಗಳಿಕೆಯಲ್ಲೂ ಟಾಕ್ಸಿಕ್, ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ಯಾವ ಸಿನ್ಮಾನೂ ಮಾಡಿರದ ಅದ್ವೀತಿಯ ದಾಖಲೆಗೆ ಸಾಕ್ಷಿಯಾಗಲಿದೆ