new updates News ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories

ಗಮನ ಸೆಳೆದ ‘ಲೈಫ್ ಟುಡೇ’ ಸಿನ್ಮಾದ ಹೊಸ ಸಾಂಗ್…!

ಗಮನ ಸೆಳೆದ ‘ಲೈಫ್ ಟುಡೇ’ ಸಿನ್ಮಾದ ಹೊಸ ಸಾಂಗ್…!
  • PublishedMay 31, 2026

ಕನ್ನಡದ ಹೊಸ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಲೈಫ್ ಟುಡೇ ಯೂ ಒಂದು. ಈಗಾಗಲೇ ಸಿನಿಮಾದ ‘ನೀನೇ ನೀನೇ ನೋಡಲ್ಲಿ’ ಹಾಡು ಬಿಡುಗಡೆ ಕಂಡು ಸಖತ್ ವೈರಲ್ ಆಗಿತ್ತು.

ಇದೀಗ ಚಿತ್ರದ ಮತ್ತೊಂದು ಸಾಂಗ್ ‘ನೀನೊಬ್ಬಳೆ’ ರಿಲೀಸ್ ಆಗಿದೆ. ನಟ ಕಿರಣ್ ಆದಿತ್ಯ ಹಾಗೂ ನಟಿ ಲೇಖಾ ಚಂದ್ರ ಕಾಣಿಸಿಕೊಂಡಿರುವ ಈ ಹಾಡು ಎಲ್ಲರ ಗಮನ ಸೆಳೆದಿದ್ದು, ಚಿತ್ರ ಬಿಡುಗಡೆಯಾಗಲು ರೆಡಿಯಾಗಿದೆ.

ಕಾಂತ ಕನ್ನಲ್ಲಿ ಡೈರೆಕ್ಷನ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾಗೆ ಮೇಘನಾ ಪ್ರದೀಪ್ ಬಂಡವಾಳ ಹೂಡಿದ್ದು, ಹಿರಿಯ ಗೀತರಚನೆಗಾರ ಮತ್ತು ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ಈ ಹಾಡನ್ನು ಅವರೇ ರಿಲೀಸ್ ಮಾಡಿದರು.ಜೊತೆಗೆ ಈ ಹಾಡನ್ನು ಶ್ರೀಧರ್ ವಿ ಸಂಭ್ರಮ್ ಸಂಗೀತ ಚಿತ್ರಕ್ಕಿದೆ.

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಾ. ನಾಗೇಂದ್ರ ಪ್ರಸಾದ್ ಪೂರ್ತಿ ಚಿತ್ರ ಪ್ರೀತಿ, ಪ್ರೇಮದ ಸುತ್ತ ತಿರುಗಲಿದೆ. ಯೂಥ್ಸ್ ಗೆ ಹತ್ತಿರವಾಗೋ ಕಥೆ. ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

Written By
Kannada Picchar

Leave a Reply

Your email address will not be published. Required fields are marked *