ಮೇಲ್ನೋಟಕ್ಕೆ ಕಂಡಂತೆ ಇಲ್ಲ ‘ಟಾಕ್ಸಿಕ್’!
ಈ ವರ್ಷವನ್ನ ಒಂದು ರೀತಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ವರ್ಷ ಎಂದು ಹೇಳಿದ್ರು ತಪ್ಪಾಗಲಿಕ್ಕಿಲ್ಲ. ಕೆಜಿಎಫ್ ಚಾಪ್ಟರ್ 2 ಆದ ಬಳಿಕ ಅವರು ನಟಿಸಿದ ಎರಡು ಬಹು ನಿರೀಕ್ಷಿತ ಸಿನಿಮಾಗಳಾದ ಟಾಕ್ಸಿಕ್ ಹಾಗೂ ರಾಮಾಯಣವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದರು.ಇನ್ನೇನು ಕೆಲವೇ ತಿಂಗಳಲ್ಲಿ ಯಶ್ ಆರ್ಭಟ ಶುರುವಾಗಲಿದೆ.
ಲಾಸ್ ವೇಗಸ್ ನಲ್ಲಿ ಸಿನಿಮಾಕಾನ್ 2026 ಸಮಾವೇಶದಲ್ಲಿ ಪಾಲ್ಗೊಂಡಿರುವ ಯಶ್ ಅವರು ಪ್ರಸಿದ್ಧ ಟಿಕೆಟಿಂಗ್ ಪ್ಲಾಟ್ ಫಾರ್ಮ್ ಆಗಿರುವ ಫ್ಯಾಡಂಗ್ ನ ಯೌಟ್ಯೂಬ್ ಚಾನಲ್ ನಲ್ಲಿ ಟಾಕ್ಸಿಕ್ ಬಗ್ಗೆ ಕೆಲವು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಅಂದುಕೊಂಡತ್ತಿಲ್ಲ ‘ಟಾಕ್ಸಿಕ್’!
ಟಾಕ್ಸಿಕ್’ ಸಿನಿಮಾದ ಕುರಿತು “ಮೊದಲ ಬಾರಿಗೆ ಇಂಗ್ಲಿಷ್ ಭಾಷೆಯಲ್ಲಿಯೂ ಚಿತ್ರೀಕರಣ ಮಾಡಿದ್ದೇವೆ. ಸಿನಿಮಾ ಹಲವು ಆಯಾಮಗಳನ್ನು ಹೊಂದಿದೆ. ಮೇಲ್ನೋಟಕ್ಕೆ ಇದು ಟಿಪಿಕಲ್ ಗ್ಯಾಂಗ್ಸ್ಟರ್ ಮೂವಿ ರೀತಿ ಕಾಣಿಸಿದರೂ, ಹಲವಾರು ಮಾನವೀಯ ಅಂಶಗಳನ್ನು ಸಾರುವ ಸಿನಿಮಾವಾಗಿದೆ.”ಎಂದು ಹೇಳಿದ್ದಾರೆ.
ಚಿತ್ರತಂಡ ರಾಯನ ಇಂಟ್ರಡಕ್ಷನ್ ತುಣುಕನ್ನು ರಿಲೀಸ್ ಮಾಡಿದ ನಂತರ ಅನೇಕ ರೀತಿಯ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಹಲವರು ಇದು ಒಂದು ಮಾಫಿಯಾ ಸಿನಿಮಾ ಎಂದು ಅಭಿಪ್ರಾಯ ಪಟ್ಟಿದ್ದರು. ಸದ್ಯಕ್ಕೆ ಯಶ್ ಅವರ ಈ ಹೇಳಿಕೆಯ ನಂತರ ಗ್ಯಾಂಗ್ಟಾ ಸ್ಟಾರ್ ಸಿನಿಮಾ ಅಲ್ಲ ಅಂದಮೇಲೆ ಯಾವ ರೀತಿಯ ಸಿನಿಮಾ ಆಗಿರಬಹುದು ಎನ್ನುವ ಚರ್ಚೆ ಉದ್ಭವವಾಗಿದೆ.