ತೆಲುಗಿನಲ್ಲಿ ತೆರೆ ಕಾಣಲಿರುವ ‘ರಕ್ಕಸಪುರದೋಳ್’…!
2026ರಲ್ಲಿ ಬಿಡುಗಡೆ ಕಂಡು ಜನರ ಪ್ರೀತಿಗೆ ಪಾತ್ರ ವಾದ ಈ ವರ್ಷದ ಕನ್ನಡದ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ರಕ್ಕಸಪುರದೋಳ್.ಸಿನಿಮಾದ ಕಥೆ, ನಟನೆ ಹಾಗೂ ಸಿನಿಮಾಟೋಗ್ರಾಫಿಗೆ ಸಿನಿ ಪ್ರಿಯರು ಮನ ಸೋತಿದ್ದರು.
ಇದೀಗ ಈ ಸಿನಿಮಾ ಮೇ 15ರಿಂದ ತೆಲುಗಿನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಕ್ರಿಯೇಟಿವ್ ಕಮರ್ಷಿಯಲ್ ಮೂವಿ ಮೇಕರ್ಸ್ಕೆ.ಎಸ್ ರಾಮರಾವ್ ರವರು ಅದ್ಧೂರಿಯಾಗಿ ಬಿಡುಗಡೆ ಮಾಡ್ತಿದ್ದಾರೆ.