ದಿಲೀಪ್ ರಾಜ್ ಯಶಸ್ವಿ ಪಯಣ
ಕನ್ನಡ ಕಿರುತೆರೆ ಮತ್ತು ಬೆಳ್ಳಿಪರೆಯ ಜನಪ್ರಿಯ ನಟ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ದಿಲೀಪ್ ರಾಜ್ ಇನ್ನಿಲ್ಲ.ತಮ್ಮ ವಿಭಿನ್ನ ನಟನೆ ಮತ್ತು ಕೌಶಲ್ಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಸರಿಸುಮಾರು 28ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ನಟನೆಯ ಜೊತೆಗೆ ನಿರ್ಮಾಣದಲ್ಲೂ ಯಶಸ್ಸು ಕಂಡಿರುವ ಪ್ರತಿಭಾವಂತ ವ್ಯಕ್ತಿ.
ದಿಲೀಪ್ ರಾಜ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 2005ರಲ್ಲಿ ತೆರೆಕಂಡ ‘ಬಾಯ್ಫ್ರೆಂಡ್’ ಸಿನಿಮಾದ ಮೂಲಕ. ಅಂದಿನಿಂದ ಇಂದಿನವರೆಗೆ ಅವರು ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಪೋಷಕ ನಟನಾಗಿ ಹಾಗೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನ ರಂಜಿಸಿದ್ದಾರೆ.
ದಿಲೀಪ್ ರಾಜ್ ಅವರು ಕೇವಲ ಬಣ್ಣ ಹಚ್ಚುವ ನಟನಾಗಿ ಉಳಿಯದೆ, ಕಥೆಗಳನ್ನು ತೆರೆಯ ಮೇಲೆ ತರುವ ನಿರ್ಮಾಪಕನಾಗಿಯೂ ಯಶಸ್ವಿಯಾದವರು. 28ಕ್ಕೂ ಹೆಚ್ಚು ಚಿತ್ರಗಳ ಅನುಭವ ಅವರ ವೃತ್ತಿಜೀವನಕ್ಕೆ ಗಟ್ಟಿಯಾದ ತಳಹದಿ ಹಾಕಿಕೊಟ್ಟಿತ್ತು. ಹೊಸ ಪ್ರತಿಭೆಗಳನ್ನ ಲಾಂಚ್ ಕೂಡ ಮಾಡಿರುವ ಇವರು ಕರ್ನಾಟಕದ ಜನರ ಮನದಲ್ಲಿ ಎಂದಿಗೂ ಶಾಶ್ವತ.