News news updates ಪಿಚ್ಚರ್ stories ಪಿಚ್ಚರ್ UPDATE

ನೇಮೋತ್ಸವದಲ್ಲಿ ಕಾಂತಾರ 3 ಸಿನಿಮಾಗೆ ಸಿಕ್ತು ದೈವದ ಗ್ರೀನ್ ಸಿಗ್ನಲ್! ರಿಷಬ್ ಭಾವುಕ

ನೇಮೋತ್ಸವದಲ್ಲಿ ಕಾಂತಾರ 3 ಸಿನಿಮಾಗೆ ಸಿಕ್ತು ದೈವದ ಗ್ರೀನ್ ಸಿಗ್ನಲ್! ರಿಷಬ್ ಭಾವುಕ
  • PublishedDecember 6, 2025


By Pallavi N Raj
ಕಾಂತಾರ ಚಾಪ್ಟರ್ 1 ಸಕ್ಸಸ್ ಬಳಿಕ ರಿಷಬ್ ಅಂಡ್ ಟೀಂ ಕೊಂಚ ರಿಲಾಕ್ಸ್ ಮೂಡಿನಲ್ಲಿದ್ದಾರೆ.. ರಿಷಬ್ ಶೆಟ್ಟಿ ತಮ್ಮ ಸಮಯವನ್ನು ಆದಷ್ಟು ಕುಟುಂಬದೊಂದಿಗೆ ಕಳಿತಾ ಇದ್ದಾರೆ.. ಹೀಗಿರುವಾಗಲೇ ಮೊನ್ನೆ ಸಿನಿಮಾ ತಂಡ ಹರಕೆ ನೇಮೋತ್ಸವದಲ್ಲಿ ಪಾಲ್ಗೊಂಡು ಹರಕೆಯನ್ನು ತೀರಿಸಿದ್ದಾರೆ.. ರಿಷಬ್ ಬಳಿ ದೈವ ಮಾತಾನಾಡುವಾಗ ಅಲ್ಲಿ ರಿಷಬ್ ಭಾವುಕರಾಗಿದ್ದಾರೆ ಆ ಕ್ಷಣ ದೈವ ನಾನಿದ್ದೇನೆ ಅನ್ನೊ ಅಭಯ ನೀಡುವುದರ ಜೊತೆಗೆ ಕಾಂತರಾ ಚಾಪ್ಟರ್ 2 ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದೆ..

ಯೆಸ್.. ಗುರುವಾರ ಡಿಸೆಂಬರ್ 4 ಮದ್ಯರಾತ್ರಿವರೆಗೂ ನಡೆದ ದೈವಕೋಲದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಕಾಂತಾರ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಕಾಂತಾರ ಚಾಪ್ಟರ್ 1 ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದವು. ಸಿನಿಮಾ ಚಿತ್ರೀಕರಣಕ್ಕೂ ಕೂಡ ತೊಂದರೆ ಉಂಟಾಗಿತ್ತು. ಈ ವೇಳೆ ರಿಷಬ್ ಶೆಟ್ಟಿ ಸಾಕಷ್ಟು ಹರಕೆಗಳನ್ನು ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರಿಗೆ ಬಂದ ಚಿತ್ರತಂಡ ಹರಕೆ ನೇಮೋತ್ಸವವನ್ನು ನೆರವೇರಿಸಿದೆ. ಈ ವೇಳೆ ಕಾಂತಾರ ಚಾಪ್ಟರ್ 3 ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಅಂದಹಾಗೆ.. ಇಡೀ ಪ್ರಪಂಚದಾದ್ಯಂತ ಕರಾವಳಿಯ ದೈವ ಹಾಗೂ ಕೋಲ ಮತ್ತು ನೇಮೋತ್ಸವದ ಬಗ್ಗೆ ಕಾಂತಾರ ಸಿನಿಮಾ ಪರಿಚಯಿಸಿತ್ತು. ಕನ್ನಡ ಸಿನಿಮಾ ಭಾರತದ ಸಿನಿರಂಗದಲ್ಲೇ ಭಾರೀ ಸದ್ದು ಮಾಡಿತ್ತು. ಆಗ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದ್ದ ಕಾಂತಾರ ಚಾಪ್ಟರ್ 1. ಅಂದ್ರೆ ಕಾಂತಾರ ಸಿನಿಮಾದ ಎರಡನೇ ಭಾಗ. ಸದ್ದಿಲ್ಲದೇ ಚಿತ್ರೀಕರಣಗೊಂಡು ಭಾರೀ ಜನಮನ್ನಣೆಗೆ ಕಾರಣವಾಗಿದ್ದು ಕಾಂತಾರ. ಆದ್ರೆ ಕಾಂತಾಯ ಚಾಪ್ಟರ್ 1 ಮಾತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ವಿಘ್ನಗಳನ್ನು ಎದುರಿಸಿತ್ತು. ಆದ ಕಾರಣ ಸಿನಿಮಾ ತಂಡ ಬಂದಪ ಹರಕೆ ತೀರಿಸಿದೆ
ಚಿತ್ರೀಕರಣದ ವೇಳೆ ನಡೆದ ಅವಘಡಗಳು, ಅವಾಂತರಗಳು ಚಿತ್ರತಂಡದ ಮೇಲೆ ದೈವಗಳ ಕೋಪ ಕಾರಣ ಎಂದು ಬಿಂಬಿತವಾಗಿತ್ತು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಪ್ರೊಡಕ್ಷನ್ ಸಾಕಷ್ಟು ಕಡೆ ಹರಕೆಯನ್ನು ಹೊತ್ತಿತ್ತು. ಅದರಲ್ಲಿ ಒಂದು ಮಂಗಳೂರಿನ ಬಾರೆಬೈಲ್​ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆ. ನಿನ್ನೆ ಮೊದಲು ನಡೆದ ಎಣ್ಣೆ ಭೂಳ್ಯ ನೇಮದಲ್ಲಿ ದೈವ ಅಭಯ ನೀಡಿತ್ತು. ನಿನ್ನೆ ಕಣ್ಣೀರು ಒರೆಸುತ್ತೇನೆ. ನನ್ನ ನುಡಿ ಇದೆ. ಧೈರ್ಯವಾಗಿ ಸಾಗು ಎಂದು ರಿಷಬ್ ಮಡಿಲಿನಲ್ಲಿ ಮಲಗಿ ಸಂಪೂರ್ಣ ಆಶೀರ್ವಾದವನ್ನು ನೀಡಿತ್ತು.
ಇನ್ನು, ಈ ಹರಕೆ ನೇಮೋತ್ಸವದಲ್ಲಿ ಕಾಂತಾರ ಚಾಪ್ಟರ್ 3 ಬಗ್ಗೆ ಕೂಡ ರಿಷಬ್ ಕೇಳಿದ್ದು ಅದಕ್ಕೂ ಕೂಡ ದೈವ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾನಿದ್ದೇನೆ ಮುಂದೆ ಸಾಗು ಅಂತ ಹೇಳಿದೆ. ದೈವದ ಅಭಯ ಸಿಕ್ಕಿರೋ ಖುಷಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ಬಾಕಿ ಇರುವ ಹರಕೆಗಳನ್ನು ತೀರಿಸಿದ ನಂತರ ಕಾಂತಾರ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ..

Written By
Kannada Picchar

Leave a Reply

Your email address will not be published. Required fields are marked *