News news updates ಪಿಚ್ಚರ್ stories ಪಿಚ್ಚರ್ UPDATE

ಸಿನಿಮಾ ರಿಲೀಸ್ ಗೂ ಮುನ್ನ ಡಿಬಾಸ್ ಆಚೆ ಬರ್ತಾರೆ, ಅವ್ರ ಆಶೀರ್ವಾದ ತಗೊತೀನಿ ಜಮೀರ್ ಪುತ್ರ!

ಸಿನಿಮಾ ರಿಲೀಸ್ ಗೂ ಮುನ್ನ ಡಿಬಾಸ್ ಆಚೆ ಬರ್ತಾರೆ, ಅವ್ರ ಆಶೀರ್ವಾದ ತಗೊತೀನಿ ಜಮೀರ್ ಪುತ್ರ!
  • PublishedDecember 6, 2025

By Pallavi N Raj
ಸಚಿವ ಜಮೀರ್ ಅಹಮದ್ ಅವರ ಮಗ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಮುಂದಿನ ವರ್ಷ ಜನವರಿ 23ರಂದು ತೆರೆಗಪ್ಪಳಿಸಲಿದೆ.. ಝೈದ್ ಖಾನ್ ಜೊತೆಗೆ ಮಿಲ್ಕಿ ಬ್ಯೂಟಿ ಮಲೈಕಾ ತೆರೆ ಹಂಚಿಕೊಂಡಿದ್ದಾರೆ.. ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬ್ಯೂಸಿ ಇರುವ ತಂಡ ಸಿನಿಮಾ ಬಗ್ಗೆ tv9 ಜೊತೆ ಮಾತನಾಡುವಾಗ ನಟ ಝೈದ್ ಖಾನ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.


ಹೌದು.. ನನಗೆ ಅಣ್ಣ ಅಂತ ಯಾರೂಬ್ಬರು ಇಲ್ಲ. ಆದ್ರೆ, ನಟ ದರ್ಶನ್ ಆ ಸ್ಥಾನವನ್ನು ತುಂಬಿದ್ದಾರೆ. ನನ್ನ ಸಿನಿಮಾ ರಿಲೀಸ್​ಗೂ ಮೊದಲು ಅವರು ಜೈಲಿನಿಂದ ಹೊರ ಬಂದೆ ಬರ್ತಾರೆ ಅನ್ನೊ ನಂಬಿಕೆ ನನಗಿದೆ. ಬರದೇ ಇದ್ದರೆ ನಾನೇ ಹೋಗಿ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡ್ಕೋತೀನಿ ಎಂದಿದ್ದಾರೆ..


ಅಂದಹಾಗೆ.. ನಟ ಝೈದ್ ಖಾನ್ ಆಡಿರೋ ಮಾತುಗಳಿಂದ ಇತ್ತ ಡಿಬಾಸ್ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮ ಬಾಸ್ ಗೆ ಹಾಗಾದ್ರೆ ವನವಾಸದಿಂದ ಮುಕ್ತಿ ಸಿಗುತ್ತೆ ಅಂತ ಅನ್ಕೊಂಡಿದ್ದಾರೆ.. ಸದ್ಯದ ಮಟ್ಟಿಗೆ ಡಿಬಾಸ್ ದರ್ಶನ್ ಆಚೆ ಬರೋದು ಗ್ಯಾರಂಟಿ ಇಲ್ಲದಿದ್ರು ದಾಸ ನಂಬಿರೋ ಚಾಮುಂಡಿ ತಾಯಿ ಕೈ ಹಿಡಿಯಬೇಕಿದೆ..


ಇನ್ನು.. ನಟ ಝೈದ್ ಖಾನ್ ಹೇಳಿರೋ ಮಾತುಗಳನ್ನ ಕೇಳಿಸಿಕೊಂಡ್ರೆ ನಿಜವಾಗಿಯೂ ಆಚೆ ಬರ್ತಾರ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ.. ಈ ಹಿಂದೆ ಝೈದ್ ಖಾನ್ ಮತ್ತು ಸೋನಾಲ್ ಅಭಿನಯದ ಬನಾರಸ್ ಸಿನಿಮಾಕ್ಕೂ ಡಿಬಾಸ್ ದರ್ಶನ್ ಸಾಥ್ ನೀಡಿದ್ರು..

ಒಟ್ನಲಿ ಅವರಿಲ್ಲದೆ ಹೇಗೆ ಅನ್ನೊ ಪ್ರಶ್ನೆ ಕೂಡ ಹುಟ್ಟುಹಾಕಿದೆ.. ಝೈದ್ ಖಾನ್ ಹೇಳೋ ಪ್ರಕಾರ ಮುಂದಿನ ವರ್ಷ ಅಂದರೆ ಜನವರಿ ಒಳಗೆ ದಚ್ಚು ಆಚೆ ಬರ್ಬೇಕು.? ಅಥವಾ ದಾಸನನ್ನು ನೋಡಲು ಕಲ್ಟ್ ಸಿನಿಮಾ ಟೀಂ ಪರಪ್ಪನ ಅಗ್ರಹಾರಕ್ಕೆ ಹೇಗುತ್ತಾ ಕಾದು ನೋಡ್ಬೇಕು!

Written By
Kannada Picchar

Leave a Reply

Your email address will not be published. Required fields are marked *