ಕುಂದಾಪುರಡ್ ರಿಷಭೋತ್ಸವ
ವಿಶ್ವದಾದ್ಯಂತ ಕರಾವಳಿಯ ಸೊಗಡನ್ನು ಪರಿಚಿಯಿಸಿದ ಕರ್ನಾಟಕದ ಹೆಮ್ಮೆಯ ಪ್ರತಿಭೆ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ. ‘ಕಾಂತಾರ’ ಚಿತ್ರದಿಂದ ಎಲ್ಲೆಡೆ ಮನೆ ಮಾತಾಗಿರುವ ನಟನಿಗೆ ಹುಟ್ಟೂರಾದ ಕುಂದಾಪುರದಲ್ಲಿ ಗೌರವವನ್ನು ಸಲ್ಲಿಸುವ ಕಾರ್ಯಕ್ರಮಕ್ಕೆ ಕುಂದಾಪುರ ಸಜ್ಜಾಗುತ್ತಿದೆ.
ಹೌದು, ರಿಷಬ್ ಶೆಟ್ಟಿ ಮೂಲತಃ ಕುಂದಾಪುರದ ಕೆರಾಡಿ ಅವರು. ತಮ್ಮ ಚಿತ್ರವಾದ ‘ಕಾಂತಾರ’, ‘ಕಾಂತಾರ ಚಾಪ್ಟರ್ 1’ ರ ಮೂಲಕ ದೈವಕೋಲದ ಬಗ್ಗೆ, ಕರಾವಳಿಯ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅರಿವನ್ನು ಮೂಡಿಸಿದ ರಿಷಬ್‌ರನ್ನು ಸೆಲೆಬ್ರೇಟ್ ಮಾಡುವ ಸಲುವಾಗಿ ‘ರಿಷಭೋತ್ಸವ’ ವನ್ನು ಜ. 3 ರಂದು ಕುಂದಾಪುರದ ಯುವ ಮೆರಿಡಿಯನ್ ಫಿಲ್ಮ್ ಸ್ಟುಡಿಯೋ, ಕೋಟೇಶ್ವರದಲ್ಲಿ ಆಯೋಜಿಸಲಾಗಿದೆ.
ಇದೀಗಾಗಲೇ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. “ಆ ದಿನ ಕುಂದಾಪುರದಲ್ಲಿ ನಕ್ಷತ್ರಗಳು ಧರೆಗಿಳಿಯಲಿದೆ, ಬಣ್ಣಗಳು ಹಾದಲಿವೆ, ಅಲ್ಲಿ ನಿಮಗೆ ಕಾಣುವುದು ಬರೀ ಬೆಳಕಲ್ಲ ದರ್ಶನ” ಎನ್ನುವ ಸಾಲನ್ನು ಪೋಸ್ಟರ್‌ನಲ್ಲಿ ಹಾಕುವ ಮೂಲಕ ಅಭಿಮಾನಿಗಳು ರಿಷಬ್ ಅವರ ಆಗಮನಕ್ಕೆ ಕಾಯುತ್ತಿದ್ದಾರೆ.