‘ಡೆವಿಲ್’ ವೇದಿಕೆಯಲ್ಲಿ ಹುಲಿಕಾರ್ತಿಕ್ ಕಣ್ಣೀರು ನಾನೊಬ್ಬ ‘ನತದೃಷ್ಟ’ ಎಂದ ನಟ
ಇವತ್ತು ಬೆಂಗಳೂರಿನಲ್ಲಿ ನಡೆದ ಡೆವಿಲ್ ಚಿತ್ರದ ಸುದ್ದಿಗೋಷ್ಟಿಯಲ್ಲಿ ನಟ ಹುಲಿ ಕಾರ್ತಿಕ್ ಕಣ್ಣೀರಿಡುತ್ತಾ, ದರ್ಶನ್ ಅವರು ಅವರ ಪ್ರತಿ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ಕಲಾವಿದರೊಡನೆ ಕುಳಿತು ಸಿನಿಮಾ ನೋಡುತ್ತಿದ್ದರು. ನಾನು ಅವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದೇನೆ,ಆದರೆ ಈ ವಿಚಾರದಲ್ಲಿ ತಾನು ನತದೃಷ್ಟ ಎಂದು ಹೇಳಿ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದರು.
ಹೌದು, ಮಿಲನ ಪ್ರಕಾಶ್ ಅವರು ನಿರ್ದೇಶಿಸಿರುವ ಸ್ಯಾಂಡಲ್ ವುಡ್ ಕಾತುರದಿಂದ ಕಾಯುತ್ತಿರುವ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನೆಮಾವೇ ‘ಡೆವಿಲ್’. ಈ ಚಿತ್ರವು ಡಿಸೆಂಬರ್ 11ರಂದು ರಿಲೀಸ್ ಆಗಲಿದೆ. ಇದರ ಪ್ರಯುಕ್ತ ಸುದೀಗೋಷ್ಠಿ ನಡೆಯಿತು.
ದರ್ಶನ್ ಅವರು ಬಹಳ ನೋವನ್ನು ಅನುಭವಿಸದ್ದಾರೆ. ಆ ಎಲ್ಲ ನೋವು, ಕಷ್ಟ ಮರೆಯುವಷ್ಟು ಈ ಚಿತ್ರ ಸಕ್ಸಸ್ ಆಗಬೇಕು ಅದಕ್ಕೆ ಎಲ್ಲರ ಸಪೋರ್ಟ್ ಬೇಕು ಎಂದರು.