new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ವೀರಗಾಸೆ ಕಥೆಯನ್ನೊಳಗೊಂಡ ‘ರುದ್ರಾಭಿಷೇಕಂ’ ರಿಲೀಸ್‌ಗೆ ಸಜ್ಜು

ವೀರಗಾಸೆ ಕಥೆಯನ್ನೊಳಗೊಂಡ ‘ರುದ್ರಾಭಿಷೇಕಂ’ ರಿಲೀಸ್‌ಗೆ ಸಜ್ಜು
  • PublishedApril 17, 2026

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ವಿಜಯ ರಾಘವೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರುದ್ರಾಭಿಷೇಕಂ’ ಸಿನಿಮಾ ಇದೇ ಮೇ ತಿಂಗಳಲ್ಲಿ ಬೆಳ್ಳಿಪರದೆಯ ಮೇಲೆ ಬರಲು ಸಿದ್ಧವಾಗಿದೆ.

ಈ ಚಿತ್ರವನ್ನು ವಸಂತ್ ಕುಮಾರ್ ನಿರ್ದೇಶಿಸಿದ್ದು, ಕಥೆಯು ವೀರಗಾಸೆ ಕಲೆ ಮತ್ತು ವೀರಭದ್ರ ದೇವರ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ದೇವನಹಳ್ಳಿ ಮತ್ತು ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿ ನಟಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಸಾಹಸ ಮತ್ತು ಭಕ್ತಿಯ ಮೇಳೈಕೆಯಿದ್ದು, ವಿಜಯ ರಾಘವೇಂದ್ರ ಅವರ ಅಭಿನಯದ ವೈವಿಧ್ಯತೆಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ವಿಭಿನ್ನ ಕಥಾಹಂದರ ಹೊಂದಿರುವ ‘ರುದ್ರಾಭಿಷೇಕಂ’ ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರಲಿದೆ.

Written By
Kannada Picchar

Leave a Reply

Your email address will not be published. Required fields are marked *