new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಯಶ್ ಐಕಾನಿಕ್ ಲುಕ್‌ಗಳ ಹಿಂದಿನ ಮ್ಯಾಜಿಕಲ್ ಹ್ಯಾಂಡ್ ಇವರದ್ದೇ…!

ಯಶ್ ಐಕಾನಿಕ್ ಲುಕ್‌ಗಳ ಹಿಂದಿನ ಮ್ಯಾಜಿಕಲ್ ಹ್ಯಾಂಡ್ ಇವರದ್ದೇ…!
  • PublishedApril 18, 2026

‘ರಾಕಿಂಗ್ ಸ್ಟಾರ್’ ಯಶ್ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರ ಸಿನಿಮಾ,ನಟನೆ ಮಾತ್ರವಲ್ಲದೆ ಅವರ ಸ್ಟೈಲಿಶ್ ಲುಕ್ ಕೂಡ ಪ್ರಮುಖ ಕಾರಣ. ಯಶ್ ಅವರ ಈ ಐಕಾನಿಕ್ ಲುಕ್‌ಗಳ ಹಿಂದೆ ಇರುವ ಆ ಶಕ್ತಿ ಎಂದರೆ ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಸರ್ದಾರಿಯಾ.

ರಾಕಿ ಭಾಯ್ ಮೂಲಕ ಟ್ರೆಂಡ್ ಸೆಟ್

ಯಶ್ ನಟನೆಯ ಕೆಜಿಎಫ್’ & ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಶ್ ಅವರ ಲುಕ್ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯಿತು. 70 – 80ರ ದಶಕದ ವಿಂಟೇಜ್ ಸೂಟ್‌,ಲಾಂಗ್ ಹೇರ್ ಮತ್ತು ಬಿಯರ್ಡ್ ಟ್ರೆಂಡ್ ಸೃಷ್ಟಿ ಮಾಡಿತ್ತು. ‘ರಾಕಿ ಭಾಯ್’ ಎಂಬ ಪವರ್‌ಫುಲ್ ಪಾತ್ರಕ್ಕೆ ಪವರ್ ಫುಲ್ ಆಗಿ ಸ್ಟೈಲಿಂಗ್ ಮಾಡಿದ ಕೀರ್ತಿ ಸಾನಿಯಾ ಅವರಿಗೆ ಸಲ್ಲುತ್ತದೆ.

ಇವತ್ತಿಗೂ ರಾಕಿ ಭಾಯ್ ಲುಕ್ ಟ್ರೆಂಡಿಂಗ್ ನಲ್ಲಿದೆ ಎಂದರೆ ಯಶ್ ಅವರ ಚಾರ್ಮ್ ಜತೆಗೆ ಆ ಸ್ಟೈಲಿಂಗ್ ಕೂಡ ಕಾರಣ.

8 ವರ್ಷಗಳ ಪಯಣ

2016 ರಲ್ಲಿ ಸಂತು ಸ್ಟ್ರೈಟ್ ಫಾರ್ ವರ್ಡ್ ಸಿನಿಮಾದಲ್ಲಿ ಯಶ್ ಅವರ ಚಾಕಲೇಟ್ ಬಾಯ್ ಲುಕ್ ಎಲ್ಲರಿಗೂ ಇಷ್ಟ ಆಗಿತ್ತು. ಆ ಲುಕ್ ಹಿಂದೆ ಇದೇ ಸಾನಿಯಾ ಸರ್ದಾರಿಯಾ ಅವರ ಪರಿಶ್ರಮವಿತ್ತು. ಅಲ್ಲಿಂದ ಶುರುವಾದ ಪಯಣ ಯಶ್ ಅವರ ಫೋಟೋ ಶೂಟ್ ಕಾಸ್ಟ್ಯೂಮ್ , ಪ್ರಮುಖ ಇವೆಂಟ್ ಗಳಿಗೆ ಸ್ಟೈಲಿಂಗ್ ಹೀಗೆ ಸುಮಾರು 8 ವರ್ಷಗಳ ಪಯಣ ಬೆಳೆದಿದೆ.

ರಾಮಾಯಣ & ಟಾಕ್ಸಿಕ್ ಸಿನಿಮಾಗಳಿಗೆ ಸ್ಟೈಲಿಂಗ್

ಯಶ್ ಅವರ ಮುಂಬರುವ ಬಹು ನಿರೀಕ್ಷಿತ ರಾಮಾಯಣ ಮತ್ತು ಟಾಕ್ಸಿಕ್ ಸಿನಿಮಾಗಳಿಗೂ ಸಾನಿಯಾ ಅವರೇ ಸ್ಟೈಲಿಂಗ್ ಮಾಡಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾದಲ್ಲಿ ರಾಯ ಹಾಗೂ ಟಿಕೆಟ್ ಎರಡು ಪಾತ್ರಗಳ ಲುಕ್ ಬಿಡುಗಡೆಯಾಗಿದ್ದು, ಎರಡು ವಿಭಿನ್ನ ಪಾತ್ರಗಳಿಗೂ ಸಾನಿಯಾ ಅವರೇ ಸ್ಟೈಲಿಂಗ್ ಮಾಡಿದ್ದಾರೆ. ಇನ್ನೂ ರಾಮಾಯಣದಲ್ಲಿ ಮೊದಲ ಬಾರಿ ಪೌರಾಣಿಕ ಪಾತ್ರವನ್ನು ಮಾಡಲಿರುವ ಯಶ್ ಅವರ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *