ಕೇಡಿ ದಿ ವಿಲನ್ ಟ್ರೈಲರ್ ಇಂದು ಬಿಡುಗಡೆ
ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಕೇಡಿ ದಿ ವಿಲನ್ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾವನ್ನು ನೋಡಲು ಧ್ರುವ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಸಿನಿಮಾದ ಪೋಸ್ಟರ್, ಸಾಂಗ್ ಹಾಗೂ ಟೀಸರ್ ಬಿಡುಗಡೆ ಕಾಣಿದ್ದು ಜನರಿಂದ ಮೆಚ್ಚುಗೆಯನ್ನ ಪಡೆದಿದೆ. ಸಿನಿಮಾದ ಟೀಸರ್ ಅಂತೂ ಸಖತ್ ಸದ್ದು ಮಾಡಿತ್ತು. ಒಂದು ಕಡೆ ಧ್ರುವ ಸರ್ಜಾ ಆದರೆ ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರ ಸ್ಪೆಷಲ್ ಎಂಟ್ರಿ ಏನಾಗಿರಬಹುದು ಎನ್ನುವ ಕೂತೂಹಲವಿದೆ. ಈ ಕುತೂಹಲಕ್ಕೆ ಟ್ರೈಲರ್ ನಿಂದ ಏನಾದ್ರೂ ಬ್ರೇಕ್ ಬೀಳುತ್ತ ಎಂದು ಕಾಯುತ್ತಿದ್ದಾರೆ.