ಪಿಚ್ಚರ್ stories ಪಿಚ್ಚರ್ UPDATE

ವಿಷ್ಣುದಾದಾ ಸಿನಿಮಾಗಳು ರೀ ರಿಲೀಸ್ ಆಗಬೇಕು; ನಾಗರಹಾವು ಚಿತ್ರವೂ ಬರಬೇಕು- ಉಪೇಂದ್ರ

ವಿಷ್ಣುದಾದಾ ಸಿನಿಮಾಗಳು ರೀ ರಿಲೀಸ್ ಆಗಬೇಕು; ನಾಗರಹಾವು ಚಿತ್ರವೂ ಬರಬೇಕು- ಉಪೇಂದ್ರ
  • PublishedMarch 9, 2026


ನಾಗರಹಾವು ಚಿತ್ರದ ರಾಮಾಚಾರಿ ಹಾಡು ಈಗಲೂ ಕಿಚ್ಚು ಹಚ್ಚುತ್ತದೆ. ಆಗಿನ ಟೈಮ್‌ ಅಲ್ಲಿ ಯುವಕರ ಹೃದಯವನ್ನ ಕದ್ದ ಈ ಹಾಡು ಇಂದಿಗೂ ಎಲ್ಲರಿಗೂ ಇಷ್ಟ ಆಗುತ್ತದೆ. ಹಾವಿನ ದ್ವೇಷ 12 ವರ್ಷ ಅನ್ನುವ ಈ ಹಾಡನ್ನ ಈಗ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಆದರೆ, ಇದನ್ನ ಯಾವುದೋ ಚಿತ್ರಕ್ಕಾಗಿ ಹಾಡಿಲ್ಲ. ಬದಲಾಗಿ ಕೋಟಿಗೊಬ್ಬ ಚಿತ್ರದ 25 ನೇ ವರ್ಷಾಚರಣೆಯ ಸಡಗರದಲ್ಲಿಯೇ ವಿಷ್ಣುವರ್ಧನ್ ಅವರನ್ನ ನೆನೆದು ಉಪೇಂದ್ರ ಈ ಗೀತೆ ಹಾಡಿದ್ದಾರೆ. ಈ ಗೀತೆಯನ್ನ ವೇದಿಕೆ ಮೇಲೆ ತಮ್ಮದೇ ಶೈಲಿಯಲ್ಲಿಯೇ ಉಪ್ಪಿ ಹಾಡಿ ವಿಷ್ಣು ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡ್ರು..
ಹೌದು.. ಕೋಟಿಗೊಬ್ಬ ಚಿತ್ರ ಬಿಡುಗಡೆಯಾಗಿ 25 ವರ್ಷ ಆಗಿದೆ. ಈ ಒಂದು ಖುಷಿಯಲ್ಲಿ ಚಿತ್ರ ರೀ-ರಿಲೀಸ್ ಆಗುತ್ತಿದೆ. ಇದರೊಟ್ಟಿಗೆ 25 ವರ್ಷದ ಸಂಭ್ರಮಾಚರಣೆ ಕೂಡ ಆಗಿದೆ.
ನನಗೆ ನಾಗರಹಾವು ರೀ-ರಿಲೀಸ್ ಆಗಬೇಕಿದೆ ಅಂತಲು ಉಪೇಂದ್ರ ಹೇಳಿದ್ರು..ಈ ಸಿನಿಮಾದಲ್ಲಿ ನನ್ನ ಮಿಸಸ್ ಪ್ರಿಯಾಂಕ ಸ್ಕ್ರೀನ್ ಶೇರ್ ಮಾಡಿರೋದು ಬಹಳ ಸಂತೋಷದ ವಿಷಯ ಅಂತ ವಿಷ್ಣುದಾದಾ ನೆನೆದ್ರು..

Written By
Kannada Picchar

Leave a Reply

Your email address will not be published. Required fields are marked *