‘ಬಕೆಟ್’ ಟ್ರೊಲ್ ಗೆ ಅನುಶ್ರೀ ಕೌಂಟರ್!
’45’ ಚಿತ್ರದ ಬಿಡುಗಡೆಯ ಸಮಯದಲ್ಲಿ ಚಿತ್ರತಂಡದಿಂದ ಅಭಿಮಾನಿಗಳ ಮೀಟ್ ಅಪ್ ಇವೆಂಟ್ ಅನ್ನು ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ನಿರೂಪಕಿಯಾದಂತಹ ಅನುಶ್ರೀ ಯವರ ಕೆಲವೊಂದು ಮಾತುಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡಿದ್ದರು.
ಇದೀಗ ಈ ಕಾಮೆಂಟ್ಸ್ ಗಳಿಗೆ ಅನುಶ್ರೀಯವರು ಉತ್ತರವನ್ನು ಟ್ರೊಲ್ ಮಾಡಿರುವವರ ಪೋಸ್ಟ್ ನ ಕಾಮೆಂಟ್ಸ್ ಸೆಕ್ಷನ್ ನಲ್ಲಿ ಕಾಮೆಂಟ್ ಹಾಕುವುದರ ಮೂಲಕ ಉತ್ತರಿಸಿದ್ದಾರೆ.
ಟ್ರೊಲ್ ಪೇಜ್ ಅನುಶ್ರೀ ಅವರು ತಿರುಪತಿ ದೇವಸ್ಥಾನಕ್ಕೆ ಹೋದ್ರೆ ಮೊದಲು ಶ್ರೀನಿವಾಸ ಕಲ್ಯಾಣ ರಾಜಕುಮಾರ್ ಅವರೇ ಕಣ್ಣಿಗೆ ಬರ್ತಾರೆ ಎನ್ನುವ ವಿಡಿಯೋ ಜೊತೆಗೆ ಹಿಂದೆ ನಡೆದ ಶೋ ಅಲ್ಲಿ ಹೇಳಿದ್ದ ಮಂಜುನಾಥ ದೇವಸ್ಥಾನಕ್ಕೆ ಹೋದ್ರೆ ಚಿರಂಜೀವಿ ಅವರು ಕಣ್ಣಿಗೆ ಕಾಣುತ್ತಾರೆ ಎಂದು ಹೇಳಿರುವ ಎರಡು ಕ್ಲಿಪ್ ಮರ್ಜ್ ಮಾಡಿ ಅದಕ್ಕೆ ‘ಇಫ್ ಬಕೆಟ್ ಹಾವ್ ಮೌತ್’ ಎನ್ನುವ ಟ್ರೊಲ್ ಅನ್ನು ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಅನುಶ್ರೀ ” ಹೌದು ಏನಿವಾಗ ಒಬ್ಬವ್ವ ಅಂದ್ರೆ ಜಯಂತಿ ಅಮ್ಮ ನೆನಪಾಗುತ್ತಾರೆ.. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗುತ್ತಾರೆ..ಶ್ರೀನಿವಾಸ ಎಂದಾಗ ಅಪ್ಪಾಜಿ..ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋವಂತ ವಿಷಯ… ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ..ನಿಮ್ಮ ಬುದ್ದಿವಂತಿಕೆಗೆ ಹಾಗೆ ಕಾಣೋದು” ಎಂದು ಕಾಮೆಂಟ್ ಹಾಕಿದ್ದಾರೆ.