ಪೈರಸಿ ವಾರ್ ಮಾಡಿ ಬಗೆಹರಿಸಕಾಗಲ್ಲ – ಸಾಧು ಕೋಕಿಲ
ಕನ್ನಡ ಚಿತ್ರ ರಂಗದಲ್ಲಿ ಸದ್ಯದಲ್ಲಿ ಚರ್ಚೆ ಆಗುತ್ತಿರುವ ವಿಷಯ ಅಂದ್ರೆ ಸಿನಿಮಾ ಪೈರಸಿ. ಈಗ ಇದರ ಬಗ್ಗೆ ಸಾಧು ಕೋಕಿಲ ಅವರು ಮಾಧ್ಯಮದವರೊಂದಿಗೆ ಈ ಪೈರಸಿ ವಿಚಾರವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
“ಪೈರಸಿ ಅನ್ನೋದು ಈಗಿನಿಂದಲ್ಲ ಮೊದಲಿನಿಂದಲೂ ಇವೆ.ಹಾಗಾಗಿ ಅದನ್ನ ವಾರ್ ಮಾಡಿ ಬಗೆಹರಿಸಕಾಗಲ್ಲ” ಎಂದು ಹಾಸ್ಯ ಕಲಾವಿದ ಸಾಧು ಕೋಕಿಲ ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಾರ್ಕ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ನಡೆಯಿತು. ಅಲ್ಲಿ ಅವರು ನೀಡಿದ ಸ್ಟೇಟ್ ಮೆಂಟ್ ಒಂದು ಬಾರಿ ಚರ್ಚೆಗೆ ಕಾರಣವಾಗಿತ್ತು. ‘ಯುದ್ಧಕ್ಕೆ ಸಿದ್ದ ಯಾಕಂದ್ರೆ ನಾವು ಮಾತಿಗೆ ಬದ್ದ ‘ ಎನ್ನುವ ಮಾತು. ಆದರೆ ಈ ಒಂದು ಮಾತು ಸ್ಯಾಂಡಲ್ ವುಡ್ ಅನ್ನೇ ಕಾಡಿತ್ತು. ಯಾರಿಗೆ ಈ ಮಾತು ಹೇಳಿರಬಹುದು, ಯಾಕೆ ಹೇಳಿರಬಹುದು ಎನ್ನುವ ವಿಚಾರವಾಗಿ ಹಲವು ಊಹ ಪೋಹಗಳು ಹರಿದಾಡಿದವು.
ಈ ವಿಷಯಕ್ಕೆ ಈಗಾಗಲೇ ಸುದೀಪ್ ಅವರು ಪೈರಸಿ ವಿಚಾರವಾಗಿ ಈ ಮಾತು ಆಡಿರುವುದರ ಬಗೆಗೆ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಒಡ್ಡಿದ್ದಾರೆ.ಇದೀಗ ಈ ಪೈರಸಿ ಸಂಬಂದಿ ಮಾತನಾಡಿರುವ ಸಾಧು ಕೋಕಿಲ ಅವರು“ಸರ್ಕಾರದಿಂದ ಪ್ರಯತ್ನಗಳು ನಡೆಯುತ್ತಿದೆ.ಇದು ಒಂದು ರೀತಿ ಪಿಡುಗು. ಅದನಂತು ನಿಲ್ಲಿಸ್ಬೇಕು” ಎಂದು ಹೇಳಿದ್ದಾರೆ.