ಯಶ್ ಮುಂದಿನ ಸಿನಿಮಾದ ನಿರ್ದೇಶಕ ಇವ್ರೇನೆ…!?
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಈಗಾಗಲೇ ವಿಭಿನ್ನ ಪ್ರಯತ್ನದ ಮೂಲಕ ಸಿನಿ ಪ್ರಿಯರ ಮನ ಗೆದ್ದಿದೆ. ಗಳಿಗೆಯಲ್ಲೂ ಸದ್ದು ಮಾಡುತ್ತಿರುವ ಟಾಕ್ಸಿಕ್ ಬಳಿಕ ಯಶ್ ಅವರ ರಾಮಾಯಣ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಈಗಾಗಲೇ ಸಿನಿಮಾದ ಮೇಲೆ ಬಾರಿ ನಿರೀಕ್ಷೆ ಇದ್ದು, ಯಶ್ ರನ್ನು ರಾವಣ ಪಾತ್ರದಲ್ಲಿ ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ . ಇದರ ಮಧ್ಯೆ ಈಗ ನಿರ್ದೇಶಕರೊಬ್ಬರ ಮಾತು ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಕುತೂಹಲವನ್ನ ಹುಟ್ಟಿಸಿದೆ.
ಟಾಕ್ಸಿಕ್, ರಾಮಾಯಣದ ಬಳಿಕ ಯಶ್ ಯಾವ ಸಿನಿಮಾ ಮಾಡ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮನೆ ಮಾಡಿರುವ ಈ ಸಂಧರ್ಭದಲ್ಲಿ ಆ ನಿರ್ದೇಶಕರೊಬ್ಬ ಮಾತು ವೈರಲ್ ಆಗುತ್ತಿದೆ.ಹೌದು ಇತ್ತೀಚೆಗೆ ತಮಿಳು ನಿರ್ದೇಶಕ ಕೊಟ್ಟಿದ್ದ ಸ್ಟೇಟ್ಮೆಂಟ್ ಒಂದು ಚರ್ಚೆಯಾಗುತ್ತಿದೆ.
ನಿರ್ದೇಶಕ ಮಿತ್ರನ್ ಅವರು ಯಶ್ ಗೆ ಕಥೆ ಹೇಳಿದ್ದೆ ಕಥೆ ಕೇಳಿ ಯಶ್ ಇಷ್ಟಪಟ್ಟಿದ್ದರು ಎಂದು ಹೇಳಿದ್ದರು. ಹಾಗಾಗಿ ಬಹುಷಃ ಯಶ್ ಮಿತ್ರನ್ ಅವರ ಸಿನ್ಮಾ ಮಾಡ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.