News

ಹವಾ ಎಬ್ಬಿಸಿದ ಟಿನಿಂಗಾ ಮಿನಿಂಗಾ.. ಎಲ್ಲೆಡೆ ಸಲಗ ಕ್ರೇಜ್

ಹವಾ ಎಬ್ಬಿಸಿದ ಟಿನಿಂಗಾ ಮಿನಿಂಗಾ.. ಎಲ್ಲೆಡೆ ಸಲಗ ಕ್ರೇಜ್
  • PublishedAugust 5, 2021

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿ ದಿನ ದಿನಕ್ಕೂ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುವ ಸಲಗ ಚಿತ್ರ ಇಂದು ಪ್ರಮೋಷನಲ್ ಸಾಂಗ್ ರಿಲೀಸ್ ಮಾಡಿದೆ, ಸಾಂಗ್ ನ ಹವಾ ಹೇಗಿದೆ ಎಂದರೆ ಎಲ್ಲಡೆ ದುನಿಯಾ ವಿಜಿ ಅಭಿಮಾನಿಗಳು ಸಲಗ ಚಿತ್ರದ ಪ್ಲೆಕ್ಸ್ ಗಳಿಗೆ ಹೂವಿನ ಹಾರ ಹಾಕಿ , ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ… ಸಲಗ ಚಿತ್ರದ ಎಲ್ಲಾ ಸಾಂಗ್ಸ್ ಈಗಾಗ್ಲೇ ಸಕತ್ ಸೌಂಡ್ ಮಾಡ್ತಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.., ಜುಟ್ಟು ಪ್ರಮೋಷನಲ್ ಸಾಂಗ್ ಅಲ್ಲಿ ರಗಡ್ ಲುಕ್ ನಲ್ಲಿ ಮಿಂಚುತ್ತಿರುವ ದುನಿಯಾ ವಿಜಿ ಸಕತ್ ಸ್ಟೈಲಿಶ್ ಆಗಿ ಕಾಣಿಸ್ಕೊಂಡಿದ್ದಾರೆ.

ಸಲಗ ಪ್ರಮೋಷನಲ್ ಸಾಂಗ್ ರಿಲೀಸ್
ಸಲಗ ಪ್ರಮೋಷನಲ್ ಸಾಂಗ್ ರಿಲೀಸ್

ಪ್ರಮೋಷನಲ್ ಸಾಂಗ್ ಮತ್ತು ಚಿತ್ರ ತಂಡಕ್ಕೆ ವಿಶ್ ಮಾಡಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.., ಕೊರೋನಾ ಕಾರಣಕ್ಕೆ ಸಿನಿಮಾ ಬಿಡುಗಡೆ ವಿಳಂಬವಾಗಿದ್ದು , ಅಗಸ್ಟ್ ತಿಂಗಳಿನಲ್ಲೇ ಸಿನಿಮಾ ರಿಲೀಸ್ ಗೆ ಸಿದ್ದತೆ ಮಾಡಿಕೊಂಡಿರುವ ಚಿತ್ರ ತಂಡ,  ದಿನಾಂಕವನ್ನು ಘೋಷಿಸಬೇಕಿದೆ.  ಪ್ರಮೋಷನಲ್ ಸಾಂಗ್ ನ ಅದ್ದೂರಿಯಾಗಿ ಸಂಭ್ರಮಿಸುತ್ತಿರುವ ವಿಜಿ ಅಭಿಮಾನಿಗಳು, ಸಿನಿಮಾ ರಿಲೀಸ್ ಅನ್ನು ಹೇಗೆ ಸಂಭ್ರಮಿಸುತ್ತಾರೆಂದು ಕಾದು ನೋಡಬೇಕಿದೆ.

******

Written By
Kannadapichhar

Leave a Reply

Your email address will not be published. Required fields are marked *