ಶಿವುಗಾಗಿ ಗೀತಾ ಎಂದ ಹ್ಯಾಟ್ರಿಕ್ ಹೀರೋ ಶಿವಣ್ಣ
ಕರುನಾಡು ಮೆಚ್ಚಿದ ಜೋಡಿಯಾಗಿರುವ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 40 ವರ್ಷಗಳಾಯಿತು. ಈ ಸಂಧರ್ಭದಲ್ಲಿ ಗೀತಾ ಅವರಿಗೆ ಸುಂದರ ಸಾಲುಗಳ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ಅವರು ವಿಶ್ ಮಾಡಿದ್ದಾರೆ.
ನಲವತ್ತು ಸಾಲದು, ನೂರು ಸಾಲದು, ಏಳು ಜನುಮವೂ ಸಾಲದು ಎಂದು ಬರೆದುಕೊಂಡಿರುವ ಅವರು ತಮ್ಮ ನೋ ಪ್ರಾಬ್ಲಮ್ ಹಾಡಿನಲ್ಲಿ ಬರುವ ರಾಮನಿಗಾಗಿ ಸೀತಾ ಶಿವುಗಾಗಿ ಗೀತಾ ಎನ್ನುವ ಲಿರಿಕ್ಸ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ.