‘ಟಾಕ್ಸಿಕ್’ ಬಗ್ಗೆ ಮೌನ ಮುರಿದ ಮೆಲ್ಲಿಸಾ
ಟಾಕ್ಸಿಕ್, ಇಡೀ ಭಾರತವೇ ಕಾಯುತ್ತಿರುವ ಬಹು ನಿರೀಕ್ಷಿತ ಸಿನಿಮಾ. ಸಿನಿಮಾದ ಟೈಟಲ್ ಘೋಷಿಸಿದ ದಿನದಿಂದ ಹಿಡಿದು ಇಲ್ಲಿಯವರೆಗು ಸಿನಿಮಾದ ಮೇಲಿರೋ ಕ್ರೇಜ್ ಜಾಸ್ತಿನೇ ಆಗ್ತಿದೆ ಹೊರತು ಕಮ್ಮಿ ಆಗುತ್ತಿಲ್ಲ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಅದರಲ್ಲೂ ಮೊದಲ ಬಾರಿಗೆ ಯಶ್ ಅವರು ಮಹಿಳಾ ನಿರ್ದೇಶನದಲ್ಲಿ ನಟಿಸುತ್ತಿರುವುದರಿಂದ ಅವರ ಪಾತ್ರವನ್ನ ಯಾವ ರೀತಿ ತೋರಿಸಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.
ಸಿನಿಮಾದ ಕಲಾವಿದರ ಬಳಗವೂ ದೊಡ್ಡ ದಾಗಿದೆ. ವಿಶೇಷ ಎಂದರೆ ಭಾರತದ ಟಾಪ್ ನಟಿಯರು ಒಂದೇ ಸಿನಿಮಾದಲ್ಲಿ ಇರುವುದು. ಕಿಯಾರ ಅಡ್ವಾನಿ, ಹುಮ ಖುರೇಶಿ, ನಯನ ತಾರ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತರಿಯ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನೇನು ಜೂನ್ 4 ರಂದು ಎಲ್ಲಾ ದಾಖಲೆಗಳನ್ನ ಬ್ರೇಕ್ ಮಾಡಲು ರೆಡಿಯಾಗಿರುವ ಟಾಕ್ಸಿಕ್ ಬಗ್ಗೆ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಹಾಗೂ ಕಾಂತಾರ ಚಾಪ್ಟರ್ 1 ರ ಮೂಲಕ ಭಾರತೀಯರ ಮನ ಗೆದ್ದಿರುವ ರುಕ್ಮಿಣಿ ವಸಂತ್ ಅವರು ಟಾಕ್ಸಿಕ್ ಚಿತ್ರದಲ್ಲಿ ಮೆಲ್ಲಿಸಾ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾದ ಬಗ್ಗೆ ಖಾಸಗಿ ಚಾನಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು “ಜೂನ್ 4 ರಂದು ಬಿಡುಗಡೆಯಾಗುತ್ತಿರುವ ಟಾಕ್ಸಿಕ್ ಚಿತ್ರಕ್ಕಾಗಿ ಕುತೂಹಲದಿಂದ ಕಾಯ್ತಿದಿನಿ. ಈ ಸಿನಿಮಾದ ವ್ಯಾಪ್ತಿ ( scale) ಎಷ್ಟು ದೊಡ್ಡದಿದೆ. ಇಂತಹದನ್ನು ನಾನು ನೋಡಿಯೇ ಇಲ್ಲ.ಡೈರೆಕ್ಟರ್ ಗೀತು ಮೋಹನ್ ದಾಸ್ ಮತ್ತು ಯಶ್ ಅವರು ಸೃಷ್ಟಿಸಿರೋ ಹೊಸ ಪ್ರಪಂಚ ವಿಭಿನ್ನವಾಗಿದೆ. ಈ ಸಿನಿಮಾದ ಭಾಗವಾಗಿರೋದು ನನಗೆ ಹೆಮ್ಮೆಯ ವಿಷಯ.ಈ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ.” ಎಂದು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಸಿನಿಮಾದ ತಾರಾಗಣ, ಪೋಸ್ಟರ್ ಗಳನ್ನು ನೋಡಿರುವ ಜನ ಸಿನಿಮಾ ಬೇರೆ ಲೆವೆಲ್ ಗೆ ಇರುತ್ತೆ ಅಷ್ಟೇ ರೇಂಜ್ಗೆ ಹಿಟ್ ಆಗುತ್ತೆ ಎಂದು ಹೇಳ್ತಿದ್ದಾರೆ.