new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE ಪುಕಾರ್ ಪುಕಾರ್ । Gossips

ಟಾಕ್ಸಿಕ್ ಸಿನಿಮಾ ಬಿಗ್ ಅಪ್‌ಡೇಟ್: ಬಿಡುಗಡೆ ದಿನಾಂಕ ಮುಂದೂಡಿಕೆ..!

ಟಾಕ್ಸಿಕ್ ಸಿನಿಮಾ ಬಿಗ್ ಅಪ್‌ಡೇಟ್: ಬಿಡುಗಡೆ ದಿನಾಂಕ ಮುಂದೂಡಿಕೆ..!
  • PublishedApril 29, 2026

ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕುರಿತು ಇದೀಗ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಈ ಮೊದಲು ಘೋಷಿಸಿದಂತೆ ಸಿನಿಮಾ ಜೂನ್ 4 ರಂದು ತೆರೆಕಾಣುತ್ತಿಲ್ಲ. ಈ ವಿಳಂಬಕ್ಕೆ ಕಾರಣ ಸಿನಿಮಾದ ಹಿನ್ನಡೆಯಲ್ಲ, ಬದಲಾಗಿ ಸಿನಿಮಾ ಪಡೆಯುತ್ತಿರುವ ಅಂತರಾಷ್ಟ್ರೀಯ ಮನ್ನಣೆ

ಇತ್ತೀಚೆಗೆ ಹಾಲಿವುಡ್‌ನ ಪ್ರತಿಷ್ಠಿತ ‘ಸಿನಿಮಾ ಕಾನ್’ ವೇದಿಕೆಯಲ್ಲಿ ‘ಟಾಕ್ಸಿಕ್’ ಚಿತ್ರದ 9 ನಿಮಿಷಗಳ ವಿಶೇಷ ಶೋ-ರೀಲ್ ಪ್ರದರ್ಶಿಸಲಾಯಿತು. ಈ ಕಿರು ದೃಶ್ಯಗಳನ್ನು ಕಂಡ ವಿದೇಶಿ ವಿತರಕರು ಅಕ್ಷರಶಃ ಬೆರಗಾಗಿದ್ದಾರೆ. ಚಿತ್ರದ ಮೇಕಿಂಗ್, ವಿಶ್ಯುವಲ್ ಕ್ವಾಲಿಟಿ ಮತ್ತು ಯಶ್ ಅವರ ಸ್ವಾಗ್ ಕಂಡು ಜಾಗತಿಕ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ

ಹಲವು ಪ್ರತಿಷ್ಠಿತ ಅಂತರಾಷ್ಟ್ರೀಯ ಸಿನಿಮಾ ವಿತರಣಾ ಸಂಸ್ಥೆಗಳು ‘ಟಾಕ್ಸಿಕ್’ ಅನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಬಿಡುಗಡೆ ಮಾಡಲು ಆಸಕ್ತಿ ತೋರಿವೆ. ಈ ಜಾಗತಿಕ ಸಹಭಾಗಿತ್ವದ ಪ್ರಕ್ರಿಯೆಗಳು ಹಾಗೂ ವಿದೇಶಿ ಮಾರುಕಟ್ಟೆಯ ಸಿದ್ಧತೆಗಳಿಗಾಗಿ ಚಿತ್ರತಂಡಕ್ಕೆ ಹೆಚ್ಚಿನ ಸಮಯದ ಅಗತ್ಯವಿದೆ.

ನಮ್ಮ ಉದ್ದೇಶ ಕೇವಲ ಒಂದು ಸಿನಿಮಾ ಮಾಡುವುದಲ್ಲ, ಭಾರತೀಯ ಸಿನಿಮಾವನ್ನು ಜಾಗತಿಕ ಭೂಪಟದಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವುದು. ಈ ನಿಟ್ಟಿನಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.”

KVN ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳ ತಾಳ್ಮೆಗೆ ಧನ್ಯವಾದ ಅರ್ಪಿಸಿವೆ. ಟಾಕ್ಸಿಕ್’ ಕೇವಲ ಭಾರತೀಯ ಸಿನಿಮಾವಾಗಿ ಉಳಿಯದೆ, ಅಂತರಾಷ್ಟ್ರೀಯ ವೇದಿಕೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ. ಅಂದುಕೊಂಡದ್ದಕ್ಕಿಂತ ದೊಡ್ಡ ಮಟ್ಟದ ವ್ಯಾಪಾರ ಮತ್ತು ಪ್ರಚಾರದ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿತ್ತು.

ಸದ್ಯದಲ್ಲೇ ಚಿತ್ರತಂಡವು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ. ಜಾಗತಿಕ ಮಟ್ಟದ ಈ ಬೆಳವಣಿಗೆಯು ಕನ್ನಡ ಚಿತ್ರರಂಗಕ್ಕೆ ಮತ್ತು ಯಶ್ ಅವರ ಕೀರ್ತಿಗೆ ಹೊಸ ಗರಿ ಮೂಡಿಸಿದಂತಿದೆ. ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾದರೂ, ಸಿಗುವ ಫಲಿತಾಂಶ ಮಾತ್ರ ಜಾಗತಿಕ ಮಟ್ಟದಲ್ಲಿರಲಿದೆ ಎಂಬುದು ಖಚಿತವಾಗಿದೆ.

Written By
Kannada Picchar

Leave a Reply

Your email address will not be published. Required fields are marked *