ಬಾಲ್ಯವನ್ನು ನೆನಪಿಸಿಕೊಂಡ ರಾಧಿಕಾ ಪಂಡಿತ್!
ರಾಧಿಕಾ ಪಂಡಿತ್ ಅವ್ರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡ್ತಾನೆ ಇರ್ತಾರೆ ಇಂದು ಅವರು ಮಾಡಿರುವ ಸಕ್ಕತ್ ತಮ್ಮ ಮಗ ಯಥರ್ ಬಾಂಬೆ ಮಿಠಾಯಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ ತಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕಿದ್ದಾರೆ
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಚಿಕ್ಕವರಿದ್ದಾಗ ದೂರದಿಂದ ಕೇಳಿಸುತ್ತಿದ್ದ ಆ ಪರಿಚಿತ ಧ್ವನಿ ಅದನ್ನು ಕೇಳಿದ ಕ್ಷಣವೇ ಮನಸ್ಸು ಖುಷಿಯಿಂದ ತುಂಬುತ್ತಿತ್ತು . ಯಾಕೆಂದರೆ ಏನು ಬರ್ತಿದೆ ಅಂತ ನಮಗೆ ಗೊತ್ತೇ ಇರುತ್ತಿತ್ತು. ಇಂದು ಅದೇ ಕ್ಷಣವನ್ನು ಯಥರ್ವ್ ಮೊದಲ ಬಾರಿ ಅನುಭವಿಸುತ್ತಿರುವುದನ್ನು ನೋಡೋದು ತುಂಬಾ ವಿಶೇಷ ಅವನ ಕಣ್ಣಲ್ಲಿದ್ದ ಕುತೂಹಲ ಮುಖದಲ್ಲಿದ್ದ ನಗು ಅಮೂಲ್ಯ. ಯಾವ ಸಿಹಿ ತಿಂಡಿ ಅಂತ ಗೆಸ್ ಮಾಡಿ ನೋಡೋಣ…”ಎಂದು ಬರೆದು ಪೋಸ್ಟ್ ಮಾಡಿದ್ದಾರೆ.