new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಮತ್ತೊಂದು ವಿವಾದಕ್ಕೆ ಸಿಲುಕಿದ ಬಿಗ್ ಬಾಸ್ ಗಿಲ್ಲಿ!

ಮತ್ತೊಂದು ವಿವಾದಕ್ಕೆ ಸಿಲುಕಿದ ಬಿಗ್ ಬಾಸ್ ಗಿಲ್ಲಿ!
  • PublishedFebruary 7, 2026

ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಪಟ್ಟ ಧರಿಸಿರುವ ಗಿಲ್ಲಿ ಅಲಿಯಾಸ್ ಗಿಲ್ಲಿ ನಟರಾಜ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ.ತಮ್ಮ ಹಾಸ್ಯ ಪ್ರವೃತ್ತಿಯಿಂದ ಕೋಟಿ ಕೋಟಿ ಜನರನ್ನು ನಗಿಸಿ ಅವರ ಮನಸಲ್ಲಿ ಜಾಗ ಮಾಡಿಕೊಂಡಿರುವ ಗಿಲ್ಲಿಯ ಹೊಸ ಚಿತ್ರದ ಪ್ರಮೋಷನ್ ವಿಚಾರದಲ್ಲಿ ಈ ವಿವಾದ ಸೃಷ್ಟಿಯಾಗಿದೆ.

ಯಸ್, ಗಿಲ್ಲಿಯವರು ನಟಿಸಿರುವ ಹೊಸ ಚಿತ್ರ ಸರಕಾರಿ ಶಾಲೆ H8 ನಿರ್ಮಾಪಕ ಗಿಲ್ಲಿ ವಿರುದ್ಧ ಅಧಿಕೃತವಾಗಿ ಫಿಲಂ ಚೇಂಬರ್ ನಲ್ಲಿ ದೂರು ನೀಡಿದ್ದಾರೆ. ಗಿಲ್ಲಿಗೆ ನಾವು ಕೇಳಿದಷ್ಟು ಸಂಭಾವನೆ ನೀಡಿದ್ದೇವೆ. ಸಿನ್ಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗಿಲ್ಲಿ ಒಂದು ದಿನವೂ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.

ನಿರ್ಮಾಪಕರು ಹೇಳುವ ಪ್ರಕಾರ ಗಿಲ್ಲಿಗೆ ಎಷ್ಟೇ ಕಾಲ್ ಮಾಡಿದರು ಕಾಲ್ ತೆಗೆಯುತ್ತಿಲ್ಲ. ಕಾಲ್ ತೆಗೆಯದಿದ್ದರೂ ಪರವಾಗಿಲ್ಲ ಒಂದು ಸಣ್ಣ ಪೋಸ್ಟ್ ಕೂಡ ಮಾಡಿಲ್ಲ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *