new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಮಾರ್ಕ್ ಹಾಡಿಗೆ ಕಿಚ್ಚನ ಮಗಳು ಸಾನ್ವಿ ಧನಿ ‘ಮಸ್ತ್ ಮಲೈಕಾ’

ಮಾರ್ಕ್ ಹಾಡಿಗೆ ಕಿಚ್ಚನ ಮಗಳು ಸಾನ್ವಿ ಧನಿ ‘ಮಸ್ತ್ ಮಲೈಕಾ’
  • PublishedDecember 14, 2025

ಸುದೀಪ್ ನಟನೆಯ ‘ಮಾರ್ಕ್’ ಚಿತ್ರ ಕ್ರಿಸ್ಮಸ್ ಹಬ್ಬದಂದು ಜನರನ್ನು ಮನರಂಜಿಸಲು ಬರುತ್ತಿದೆ. ವಿಜಯ ಕಾರ್ತಿಕೇಯ ಅವರು ನಿರ್ದೇಶಿಸಿರುವ ಈ ಸಿನಿಮಾ ಟ್ರೈಲರ್ ನೋಡೀನೇ ಜನ ಪಕ್ಕ ಸೂಪರ್ ಹಿಟ್ ಎನ್ನುವ ತೀರ್ಪನ್ನು ಸಿನಿಮಾ ರಿಲೀಸ್ ಗು ಮೊದಲೇ ಊಹಿಸಿದ್ದಾರೆ.

ಚಿತ್ರದ ಮಾಸ್ ಸಾಂಗ್ ‘ಸೈಕೋ ಸೈತಾನ್ ‘ ಈಗಾಗಲೇ ಟ್ರೆಂಡಿಂಗ್ ನಲ್ಲಿ ಇದೆ. ಇದೀಗ ಚಿತ್ರ ತಂಡವು ಇನ್ನೊಂದು ಸಾಂಗ್ ಅನ್ನು ಬಿಡುಗಡೆ ಮಾಡಲು ಹೊರಟ್ಟಿದ್ದಾರೆ.

ಹೌದು, ಸುದೀಪ್ ಅವರು ಸ್ವತಃ ತಮ್ಮ ಎಕ್ಸ್ ಖಾತೆಯಲ್ಲಿ ತನ್ನ ಮಗಳು ಸಾನ್ವಿ ಸುದೀಪ್ ಹಾಗೂ ನಾಕಾಶ್ ಅಝೀಜ್ ಧನಿ ನೀಡುರುವ ವೈಬ್ರೇಟ್ ಹಾಡೊಂದು ನಾಳೆ ಸಂಜೆ 3.30 ಕ್ಕೆ ಸರಿಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹಂಚಿ ಕೊಂಡಿದ್ದಾರೆ.

ಸುದೀಪ್ ಮಗಳು ಸಾನ್ವಿ ಅದ್ಭುತ ಗಾಯಕಿ ಎಂದು ಈ ಹಿಂದೆಯೇ ಸಾಬೀತು ಮಾಡಿದ್ದರು. ಇದು ಅವರ ಮೊದಲ ಅಧಿಕೃತ ಸಾಂಗ್ ಆಗಿದೆ. ‘ಮಸ್ತ್ ಮಲೈಕಾ’ ಅನ್ನೋ ಹಾಡಿಗೆ ಧ್ವನಿಯಾಗಿದ್ದಾರೆ.ಇನ್ನು ಸ್ಯಾಂಡಲ್ ವುಡ್ ನ ಚೆಲುವೆ ನಿಶ್ವಿಕಾ ನಾಯ್ಡು ಜೊತೆಗೆ ಸುದೀಪ್ ಹೆಜ್ಜೆ ಹಾಕಲಿದ್ದಾರೆ.

ಈ ಹಾಡಿನ ಸಂಗೀತ ನಿರ್ದೇಶನವನ್ನು ಅಜನೀಶ್ ಲೋಕನಾಥ್ ಮಾಡಿದ್ದು, ಇನ್ನು ಕುತೂಹಲ ಹೆಚ್ಚು ಮಾಡಿದೆ. ಹಾಗಾಗಿ ಈ ಹಾಡಿಗಾಗಿ ಕಿಚ್ಚನ ಫ್ಯಾನ್ಸ್ ವೇಟ್ ಮಾಡ್ತಾ ಇದ್ದಾರೆ.

Written By
Kannada Picchar

Leave a Reply

Your email address will not be published. Required fields are marked *