new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅಣ್ಣಾವ್ರಂತೆ ಅಯ್ಯಪ್ಪನ ಗೀತೆಗೆ ಶಿವಣ್ಣನ ಧನಿ!

ಅಣ್ಣಾವ್ರಂತೆ ಅಯ್ಯಪ್ಪನ ಗೀತೆಗೆ ಶಿವಣ್ಣನ ಧನಿ!
  • PublishedDecember 10, 2025

ಕರುನಾಡ ಚಕ್ರವರ್ತಿ ಶಿವಣ್ಣ ನವರ ಅಭಿಮಾನಿಗಳಿಗೆ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸಂತಸದ ಸುದ್ದಿ. ಶಿವರಾಜ್ ಕುಮಾರ್ ಅವರ ಕಂಠದಲ್ಲಿ ಮೊಳಗಿದೆ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ.

ಹೌದು, ಕಲಿಯುಗದ ವರದ ನಾದ ಅಯ್ಯಪ್ಪ ಸ್ವಾಮಿಯ ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ ‘ ಎಂಬ ಭಕ್ತಿ ಗೀತೆಗೆ ಶಿವರಾಜ್ ಕುಮಾರ್ ಅವರು ಧನಿ ಆಗಿದ್ದಾರೆ. ಈ ಗೀತೆಯು ಇದೀಗ ಬಿಡುಗಡೆಯಾಗಿದೆ.

ಸುವರ್ಣ ಕರ್ನಾಟಕ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಗುರುಸ್ವಾಮಿಗಳಾದ ನವೀನ್ ಶಕ್ತಿ ಮತ್ತು ಮಂಡಳಿಯ ಅಯ್ಯಪ್ಪ ಭಕ್ತಾದಿಗಳ ಕೋರಿಕೆಯ ಮೇರೆಗೆ ಶಿವಣ್ಣ ಅವರು ಈ ಗೀತೆಯನ್ನು ಹಾಡಿದ್ದಾರೆ.

ಒಟ್ಟಾರೆಯಾಗಿ ಭಕ್ತಿ ಪೂರ್ವ ಸಂದೇಶ ಹಾಗೂ ಶಿವಣ್ಣನ ಧನಿ ಒಂದೊಳ್ಳೆ ಕೊಡುಗೆಯಾಗಿ ಹೊರ ಹೊಮ್ಮಿದೆ. ಶಿವಣ್ಣನ ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *