ದರ್ಶನ್ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಧ್ಯಮಗಳ ಮೇಲೆ ವಿಜಯಲಕ್ಷ್ಮೀ ದರ್ಶನ್ ಬೇಸರ
ಇತ್ತೀಚಿಗೆ ದರ್ಶನ್ ಅವರ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಅವರು ಜೈಲಿನಲ್ಲಿ ಇರೋರಿಗೆ ದೈಹಿಕ ದೌರ್ಜನ್ಯ ಹಾಗೂ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂಬ ಗಾಳಿ ಸುದ್ದಿ ಕೇಳಿ ಬಂದಿತ್ತು.
ಇದೀಗ ಈ ಎಲ್ಲಾ ಊಹ ಪೋಹಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬ್ರೇಕ್ ಹಾಕಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆಯುವ ಮೂಲಕ ಎಲ್ಲಾ ವದಂತಿ ಗಳಿಗೆ ಹಾಗೂ ಮಾಧ್ಯಮಗಳಿಗೆ ಬಿಸಿ ಮುಟ್ಟಿಸ್ಸಿದ್ದಾರೆ.
ಅವರು ಸ್ಟೋರಿ ಅಲ್ಲಿ ” ನಾನು ಜೈಲಿಗೆ ಭೇಟಿ ನೀಡಿ, ಅಧಿಕಾರಿಗಳು, ದರ್ಶನ್ ಅವರ ಜೊತೆಗೆ ಹಲ್ಲೆಗೊಳಗಾದವರ ಜೊತೆಗೆ ಮಾತನಾಡಿದಾಗ ಎಲ್ಲಾ ವದಂತಿಗಳು ಸುಳ್ಳು ಎಂದು ತಿಳಿಯಿತು. ಇನ್ನು ಮಾಧ್ಯಮಗಳು ಸತ್ಯತೆಗಿಂತ ಸುಳ್ಳನ್ನು ಆರಿಸಿಕೊಂಡು ಮಧ್ಯಮಗಳ ನೈತಿಕ ಮೌಲ್ಯಕ್ಕೆ ಧಕ್ಕೆ ಉಂಟು”ಮಾಡಿರುವ ಬೇಸರ ವನ್ನು ವ್ಯಕ್ತ ಪಡಿಸಿದರು.ಆದರೆ ಇದು ತಿಳಿದು ಸುಳ್ಳು ನಿರೂಪಣೆಗಳನ್ನು ಮಾಡುವ ಮಾಧ್ಯಮಗಳಿಗೆ ಮಾತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗೇಯೇ “ಜವಾಬ್ದಾರಿಯುತ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ”.
“ಸಾರ್ವಜನಿಕರು ತಮ್ಮ ಭರವಸೆಯನ್ನು ಕಳೆದುಕೊಳ್ಳುವ ಮೊದಲು ಜಾಗೃತರಾಗಿ” ಎಂದು ಹೇಳಿದ್ದಾರೆ.ಹೀಗೆ ಬರೆದುಕೊಂಡು ಸುಳ್ಳು ಸುದ್ದಿ ಹರಡಿದವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.ಆದರೆ ಈ ಎಲ್ಲಾ ಉಹಾ ಪೋಹಾಗಳು ಎಲ್ಲಿಂದ ಬರುತ್ತಿದೆ ಎನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.