2026ರ ಮೊದಲ ಸಿನ್ಮಾ ತೀರ್ಥರೂಪ ತಂದೆಯವರಿಗೆ..ಕುತೂಹಲ ಹುಟ್ಟಿಸಿದ ಭಾವುಕ ಟ್ರೈಲರ್
‘ಹೊಂದಿಸಿ ಬರೆಯಿರಿ’ ಖ್ಯಾತಿಯ ರಾಮೇನ್ಹಳ್ಳಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ತೀರ್ಥರೂಪ ತಂದೆಯವರಿಗೆ‘ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಅದರ ಪ್ರಕಾರ ಈ ಚಿತ್ರದ ಕಥೆ ತಂದೆ ಮಗನ ಹುಡುಕಾಟದ ಮೇಲೆ ಎನ್ನುವ ಸಣ್ಣ ಸುಳಿವು ಸಿಕ್ಕಿದೆ.ಸಿತಾರ ಅವರ “ಸಮಾಜ ನನಗೆ ಎಷ್ಟು ಮಾರ್ಕ್ಸ್ ಕೊಡುತ್ತೋ ಅದು ನಂಗೆ ಬೇಕಾಗಿಲ್ಲ,ನಂಗೆ ನಿನ್ ತಾಯಿ ಆಗಿ ಪಾಸ್ ಆದ್ರೆ ಸಾಕು” ಈ ಸಂಭಾಷಣೆ ಅಲ್ಲಿ ಒಬ್ಬ ಸಿಂಗಲ್ ಪೇರೆಂಟ್ ತನ್ನ ಮಕ್ಕಳ ನಿರೀಕ್ಷೆಯನ್ನು ತಲುಪಬೇಕು ಅನ್ನೋ ಆಶಯ ಹಾಗೂ ಮಗನ ಪ್ರೀತಿಗೆ ಪರಿತಪಿಸುವ ಹಂಬಲ ಕಾಣುತ್ತೆ.
ಚಿತ್ರದಲ್ಲಿ ನಿಹಾರ್ ಮುಕೇಶ್, ರಚನಾ ಇಂದರ್, ರಾಜೇಶ್ ನಟರಂಗ, ಸಿತಾರ, ಅಜಿತ್ ಹಂಡೆ ಹೀಗೆ ಮುಂತಾದ ನಟರು ನಟಿಸಿದ್ದಾರೆ.
ಹೊಸ ಮುಖ ಪರಿಚಯ
ನಿಹಾರ್ ಮುಖೇಶ್, ಈ ಚಿತ್ರದ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಈ ಹಿಂದೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿನ ಧಾರವಾಹಿಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅದೇ ರೀತಿ ಚಿತ್ರದಲ್ಲಿ ಮಲೆನಾಡಿನ ವೈಭೋಗ,ಈ ಜನರೇಶನ್ ನಲ್ಲಿ ಕಾಣಲಾಗದ ಹಳೆ ಕಾಲಾದ ಪತ್ರ ಬರವಣಿಗೆಯ ನೆನಪು ಹೀಗೆ ಅನೇಕ ವಿಚಾರಗಳನ್ನು ಒಳಗೊಂಡಿರುವ ಮೂರು ತಲೆಮಾರಿಗೂ ಬೇಕಿರುವ ಚಿತ್ರ ಎಂದು ಟ್ರೈಲರ್ ಮೂಲಕ ತಿಳಿಯಬಹುದು.
ಸಿನಿಮಾದ ಸುದ್ದಿಗೋಷ್ಠಿ
ಸಿನಿಮಾದ ಸುದ್ದಿಗೋಷ್ಠಿ ಇಂದು ನಡೆಯಿತು. ಚಿತ್ರದ ಕುರಿತು ಸಿನಿಮಾದ ನಾಯಕ, ನಾಯಕಿ ಏನು ಹೇಳಿದರು ಎನ್ನುವ ವಿವರಣೆ ಇಲ್ಲಿದೆ.
ಸುದ್ದಿಗೋಷ್ಠಿ ಯಲ್ಲಿ ಚಿತ್ರದ ನಾಯಕ ನಿಹಾಲ್ “ನಾನು ಕನ್ನಡ ಜನತೆಗೆ ಕಿರುತೆರೆಯಲ್ಲಿ ಮೂಡಿಬಂದ ನಾಗಕನ್ನಿಕೆ ಧಾರವಾಹಿಯ ಮೂಲಕ ಪರಿಚಯ. ಅದ ಬಳಿಕ ತೆಲುಗಿನಲ್ಲಿ ಅವಕಾಶ ಸಿಕ್ಕಿತು. ಈ ಸಣ್ಣ ಸೀರಿಯಲ್ ಪಯಣ ನನಗೆ ಈ ಸಿನಿಮಾಗೆ ಸಹಾಯ ಮಾಡಿತು ಎಂದು ವ್ಯಕ್ತ ಪಡಿಸಿದರು.
ಚಿತ್ರದ ನಾಯಕಿಯಾದ ರಚನಾ ಅವರು ತನಗೆ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳೇ ಇಷ್ಟ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೂ ನನ್ನ ಅಜ್ಜಿಯ ಪಾತ್ರಕ್ಕೂ ಲಿಂಕ್ ಇದೆ ಎಂದರು, ಜೊತೆಗೆ ಸಿನಿಮಾದ ಹಾಡುಗಳು ಬಹಳ ಚೆನ್ನಾಗಿದೆ ಎಂದು ಹೊಗಳಿದರು.
ಚಿತ್ರದ ಹಾಡುಗಳಾದ ನನದೇ ಜಗದಲ್ಲಿ, ನೀ ನನ್ನವಳೇ ಈಗಾಗಲೇ ರಿಲೀಸ್ ಆಗಿದ್ದು ಜನ ಮನ್ನಣೆಯನ್ನು ಪಡೆದಿತ್ತು.