News news updates ಪಿಚ್ಚರ್ stories ಪಿಚ್ಚರ್ UPDATE

ಜಸ್ಟ್ 2ಗಂಟೆಯಲ್ಲಿ ಅಳಿಸಲಾಗದ ದಾಖಲೆ ಬರೆದ ಡಿಬಾಸ್ ‘ಡೆವಿಲ್’

ಜಸ್ಟ್ 2ಗಂಟೆಯಲ್ಲಿ ಅಳಿಸಲಾಗದ ದಾಖಲೆ ಬರೆದ ಡಿಬಾಸ್ ‘ಡೆವಿಲ್’
  • PublishedDecember 6, 2025


By Pallavi N Raj
ಚಾಲೆಂಜಿಂಗ್ ಸ್ಚಾರ್ ದರ್ಶನ್​ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್​​ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಬಾಡೂಟ ಸಿಕ್ಕಷ್ಟೆ ಖುಷಿಯಾಗಿದೆ.. ಡಿಸೆಂಬರ್ ಧಮಾಕದಲ್ಲಿ ಡೆವಿಲ್ ಕೂಡ ಒಂದು.. ದಿ ಡೆವಿಲ್​​ ಟ್ರೇಲರ್​ ಮೂಲಕ ಅಭಿಮಾನಿಗಳು ಕುತೂಹಲವನ್ನು ದುಪ್ಪಟ್ಟುಗೊಳಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟೆ ಅಲ್ದೆ ತೆರೆಕಂಡ ಕೆಲ ಹೊತ್ತಲೇ ದಾಖಲೆಯನ್ನೂ ಬರೆದಿದೆ..

ಹೌದು.. ಈ ಡಿಸೆಂಬರ್​​​ನಲ್ಲಿ ಸ್ಯಾಂಡಲ್​​ವುಡ್​ಗೆ ಸಿನಿಮಾ ಸುಗ್ಗಿ ಅಂದ್ರೆ ತಪ್ಪಾಗಲ್ಲ.. ಡಿಸೆಂಬರ್​​​ 11ರಂದು ದಿ ಡೆವಿಲ್​ ಬಿಡುಗಡೆಯಾದರೆ, 25ರಂದು ಕಿಚ್ಚ ಸುದೀಪ್‍ ನಟನೆಯ ಮಾರ್ಕ್ ಮತ್ತು ಶಿವರಾಜ್​​ಕುಮಾರ್, ಉಪೇಂದ್ರ, ರಾಜ್‍ ಬಿ ಶೆಟ್ಟಿ ಅವರ 45 ಸಿನಿಮಾ ತೆರೆಕಾಣಲಿದೆ. ಈ 3 ಬಿಗ್​ ಬಜೆಟ್​​, ಸ್ಟಾರ್ ಸಿನಿಮಾಗಳ ಪೈಕಿ ಮೊದಲು ಬಿಡುಗಡೆಯಾಗಲಿರುವ ದಿ ಡೆವಿಲ್​​ ತನ್ನ ಟ್ರೇಲರ್​ ಮೂಖಂತರ ಪ್ರೇಕ್ಷಕರ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ಬಿಡುಗಡೆಯಾದ ಕೇವಲ 2 ಗಂಟೆಗಳಲ್ಲಿ 1 ಮಿಲಿಯನ್​​​ ಅಂದ್ರೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ. ಸಂಜೆ 4 ಗಂಟೆ ಹೊತ್ತಿಗೆ 2 ಮಿಲಿಯನ್​​ ವೀಕ್ಷಣೆಯನ್ನು ದಾಟಿತ್ತು.

ಅಂದಹಾಗೆ.. 24 ಹಾರ್ಸ್ ಅಂದ್ರೆ 24 ಗಂಟೆಯಲ್ಲಿ 64 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.. ವೀವ್ಸ್ ಗೆ ಸಂಬಂಧಪಟ್ಟಂತೆ ಚಿತ್ರದ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಶ್ರೀ ಜೈ ಮಾತಾ ಕಂಬೈನ್ಸ್, ಪೋಸ್ಟ್​ ಶೇರ್ ಮಾಡಿ ಅಧಿಕೃತ ಮಾಹಿತಿ ಕೊಟ್ಟಿದೆ. ದರ್ಶನ್​ ಅವರ ಪೋಸ್ಟರ್ ಶೇರ್ ಮಾಡಿದ ಅಫೀಶಿಯಲ್​ ಪೇಜ್, ದಿ ಡೆವಿಲ್ ಟ್ರೇಲರ್ ಕೇವಲ 2 ಗಂಟೆಗಳಲ್ಲಿ 1 ಮಿಲಿಯನ್+ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದು ಫೈಯರ್ ಎಮೋಜಿಯೊಂದಿಗೆ ಹಾಕ್ಕೊಂಡಿದೆ ಸಿನಿಮಾ ಡಿಸೆಂಬರ್​ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಬರೆದುಕೊಂಡಿದೆ. ಕಾಮೆಂಟ್​ ಸೆಕ್ಷನ್​ನಲ್ಲಿ ಜೈ ಡಿ ಬಾಸ್​ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು.. ಪ್ರಕಾಶ್ ವೀರ್ ಅವರೇ ಕಥೆ, ಚಿತ್ರಕಥೆ ಬರೆದು ಸಿನಿಮಾವನ್ನು ಡೈರೆಕ್ಟ್ ಮಾಡಿ ನಿರ್ಮಿಸಿದ್ದಾರೆ. ಸಿನಿಮಾ ಡಿಸೆಂಬರ್​ 11ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Written By
Kannada Picchar

Leave a Reply

Your email address will not be published. Required fields are marked *