News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories

ಕಾಂತಾರ ರಿಷಬ್ ನ ಅಣಕಿಸಿ ರಣವೀರ್ ಸಿಂಗ್ ಅಧಿಕಪ್ರಸಂಗ..!ದೇಶದಾದ್ಯಂತ ಟೀಕೆಗಳ ಸುರಿಮಳೆ

ಕಾಂತಾರ ರಿಷಬ್ ನ ಅಣಕಿಸಿ ರಣವೀರ್ ಸಿಂಗ್ ಅಧಿಕಪ್ರಸಂಗ..!ದೇಶದಾದ್ಯಂತ ಟೀಕೆಗಳ ಸುರಿಮಳೆ
  • PublishedDecember 2, 2025

ಗೋವಾದ ಪಣಾಜಿ ಯಲ್ಲಿ ನಡೆದ 56 ನೇಯ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾದ ಕ್ಲೋಸಿಂಗ್ ಸೆರೆಮನಿಯಲ್ಲಿ ರಣವೀರ್ ಸಿಂಗ್ ನ ಒಂದು ಮಾತು ಹಾಗೂ ಕಾಂತರದ ಇಮಿಟೇಷನ್ ಗೆ ಬಾರಿ ಪ್ರಮಾಣದ ಟೀಕೆ ವ್ಯಕ್ತವಾಗುತ್ತಿತ್ತು.

ರಣವೀರ್ ಸಿಂಗ್ ವೇದಿಕೆಯಲ್ಲಿ ಕಾಂತರ ಚಿತ್ರದ ನಿರ್ದೇಶಕ ಹಾಗೂ ನಾಯಕ ರಿಷಬ್ ಶೆಟ್ಟಿ ಯನ್ನು ಚಿತ್ರದ ಯಶಸ್ಸಿಗೆ ಶುಭಾಶಯವನ್ನು ಕೋರುತ್ತಾ, ಚಾಮುಂಡಿ ದೇವಿಯ ಅನುಕರಣೆಯನ್ನು ಮಾಡಿದರು ಅದರ ಜೊತೆಗೆ ದೈವವನ್ನು ದೆವ್ವ ಎನ್ನುವ ಮೂಲಕ ಅಪಮಾನ ಮಾಡಿದ್ದರು. ಇದರ ವಿರುದ್ಧ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಕ್ಷಮೆಯಾಚಿಸಿದ ರಣವೀರ್

ಇದೀಗ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಾನು ರಿಷಬ್ ಶೆಟ್ಟಿಯವರ ಅದ್ಬುತ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು,ಆ ದೃಶ್ಯವನ್ನು ಮಾಡಲು ಎಷ್ಟು ಕಷ್ಟ ಎಂದು ಒಬ್ಬ ನಂತನಾಗಿ ನನಗೆ ತಿಳಿದಿದೆ. ಅದೇ ರೀತಿ ನಾನು ಯಾವಾಗಲೂ ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ಗೌರವಿಸುತ್ತೇನೆ.ನಾನು ಯಾರೊಬ್ಬರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲಿ, ಕ್ಷಮೆಯನ್ನಾಚಿಸುತ್ತೇನೆ ಎಂದು ಸ್ಟೋರಿ ಹಾಕಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *