News news updates ಪಿಚ್ಚರ್ EXCLUSIVE ಪಿಚ್ಚರ್ UPDATE

ನಾನ್ ಬರ್ತಿದ್ದೀನಿ‌‌ ಚಿನ್ನ..!! ಡಿ ಬಾಸ್ ಡೆವಿಲ್ Trailer Alert

ನಾನ್ ಬರ್ತಿದ್ದೀನಿ‌‌ ಚಿನ್ನ..!! ಡಿ ಬಾಸ್ ಡೆವಿಲ್ Trailer Alert
  • PublishedDecember 1, 2025

ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ‘ಡೆವಿಲ್’ ಇದೇ ತಿಂಗಳಿನ ಡಿಸೆಂಬರ್ 11 ರಂದು ಬಿಡುಗಡೆಯಾಗಲಿದೆ. ಇದೀಗ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಚಿತ್ರದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದ್ದು, ಅಭಿಮಾನಿಗಳು ಚಿತ್ರದ ರಿಲೀಸ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಟ್ರೈಲರ್ ರಿಲೀಸ್

ಇದೇ ಸಂದರ್ಭದಲ್ಲಿ ಚಿತ್ರ ತಂಡವು ‘ಡೆವಿಲ್’ ಸಿನಿಮಾದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಪ್ರಸ್ತಾಪಿಸಿದ್ದಾರೆ.ಇದೇ ಬರುವ ಡಿಸೆಂಬರ್ 5 ನೇ ತಾರೀಕು ಡೆವಿಲ್ ಚಿತ್ರದ ಟ್ರೈಲರ್ ಲಾಂಚ್ ಆಗಲಿದೆ ಎಂದು ತಿಳಿಸಿದ್ದಾರೆ.

ಅಭಿಮಾನಿಗಳಿಂದ ಪ್ರಚಾರ

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂದಿಯಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಡೆವಿಲ್ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಲು ಆಗದ ಕಾರಣ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ತಾವು ದರ್ಶನ್ ಅವರ ಜೊತೆಗೆ ಸದಾ ಇರುತ್ತೇವೆ ಎನ್ನುವ ಸಂದೇಶವನ್ನು ನೀಡಿದ್ದಾರೆ.

ಚಿತ್ರದ ಟೀಸರ್, ದರ್ಶನ್ ಅವರ ಲುಕ್, ಹಾಡುಗಳು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದ್ದು, ದರ್ಶನ್ ಅವರ ‘ಕಾಟೇರಾ’ ಫಿಲಂ ಸೂಪರ್ ಹಿಟ್ ಆದ ಬಳಿಕ ಸಿನಿ ಪ್ರಿಯರಲ್ಲಿ ‘ಡೆವಿಲ್’ ಫಿಲಂ ನಿರೀಕ್ಷೆ ಹೆಚ್ಚಾಗಿದೆ.

Written By
Kannada Picchar

Leave a Reply

Your email address will not be published. Required fields are marked *