ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸೆಟ್ಟೇರಿತು ಜನಾರ್ದನರೆಡ್ಡಿ ಪುತ್ರನ ಸಿನಿಮಾ
ಗಣಿ ಧಣಿ ಎಂದೇ ಪ್ರಖ್ಯಾತಿ ಗಳಿಸಿರುವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ..ಈಗಾಗಲೇ ಸಿನಿಮಾಗೆ ಬೇಕಿರುವಂತೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿರುವ ಕಿರೀಟಿ ಅಭಿನಯದ ಮೊದಲ ಸಿನಿಮಾದ ಮುಹೂರ್ತ ಇಂದು ನಡೆದಿದೆ ತಾರಾಬಳಗವಿರುವ ಈ ಚಿತ್ರವನ್ನ ಟಾಲಿವುಡ್ ಮೂಲದ ವರಾಹಿ ಸಿನಿಮಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಇಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿತ್ತು ಚಿತ್ರರಂಗದ ಗಣ್ಯಾತಿಗಣ್ಯರು ಕಿರೀಟಿಗೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ …

ಜನಾರ್ಧನ್ ರೆಡ್ಡಿ ಮಗ ಕಿರೀಟಿ ಚಿತ್ರದ ಮುಹೂರ್ತ ಕ್ಕೆ ಕನ್ನಡ ಮತ್ತು ತೆಲುಗು ಸಿನಿಮಾ ಸ್ಟಾರ್ಸ್ ಸಾಥ್ ನೀಡಿದ್ದಾರೆ..ರಾಜಮೌಳಿ ಹಾರೈಕೆಯಿಂದ ಶುರುವಾಗಿದೆ ಕಿರಿಟಿ ಸಿನಿಯಾನ…

ಜನಾರ್ಧನ್ ರೆಡ್ಡಿ ಪುತ್ರ ಕಿರಿಟಿ ಸಿನಿಮಾದ ಮುಹೂರ್ತಕ್ಕೆ
ರಾಜಮೌಳಿ, ರವಿಚಂದ್ರನ್ , ಜನಿಲಿಯಾ ಅತಿಥಿಗಳಾಗಿ ಆಗಮಿಸಿದ್ದು ಮಾಯಾಬಜಾರ್ ಸಿನಿಮಾ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ಕಿರಿಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ…

ರೆಡ್ಡಿ ಪುತ್ರ ಕಿರೀಟಿ ಚಿತ್ರಕ್ಕೆ ಕ್ಲಾಪ್ ಮಾಡಿದ ರಾಜಮೌಳಿ ಆಲ್ ದ ಬೆಸ್ಟ್ ಹೇಳಿದ್ರೆ ..ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ರವಿಚಂದ್ರನ್ ಶುಭ ಹಾರೈಸಿದ್ರು..
ಇನ್ನು ಕಿರೀಟಿ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ಅಭಿನಯ ಮಾಡುತ್ತಿದ್ದಾರೆ…