News

ಶಿವಣ್ಣನ 125ನೇ ಸಿನಿಮಾ, ಹೀರೋಯಿನ್ ಫಿಕ್ಸ್

ಶಿವಣ್ಣನ 125ನೇ ಸಿನಿಮಾ, ಹೀರೋಯಿನ್ ಫಿಕ್ಸ್
  • PublishedDecember 7, 2021

ಪುನೀತ್ ರಾಜಕುಮಾರ್ ನಿಧನ ದ ಬಳಿಕ ಸಾಕಷ್ಟು ನೋವಿನಲ್ಲಿರುವ ಶಿವಣ್ಣ, ಸದ್ಯ ಈ ಹಿಂದೆ ನಿಗದಿಯಾಗಿರುವ ಪ್ರಾಜೆಕ್ಟ್ ಗಳನ್ನು ಒಂದೊಂದಾಗಿ ಕೈಗೆತ್ತಿಕೊಳ್ಳುತ್ತಿದ್ದಾರೆ. ಭಜರಂಗಿ 2 ಚಿತ್ರ ಬಿಡುಗಡೆ ಆದ ದಿನವೇ ಅಪ್ಪು ಅವರ ಸಾವು ಇಡೀ ರಾಜ್ಯವನ್ನೆ ತಲ್ಲಣಗೊಳಿಸಿತ್ತು. ಕೆಲವು ದಿನಗಳ ನಂತರ ಪುನಃ ಭಜರಂಗಿ 2 ಚಿತ್ರವನ್ನು ಪ್ರಮೋಟ್ ಮಾಡಲು ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಣೆ ಮಾಡುವ ಮೂಕಲ ಇಡೀ ಚಿತ್ರತಂಡಕ್ಕೆ ಧೈರ್ಯ ತುಂಬಿದ್ದರು ಶಿವಣ್ಣ. ಈಗ ತಮ್ಮ ಹೋಂ ಬ್ಯಾನರ್ ನ ಮೊದಲ ಸಿನಿಮ ವೇದ ಚಿತ್ರದ ಬಗ್ಗೆ ಮಹತ್ವದ ಅಪ್ಡೇಟ್ ಸಿಕ್ಕಿದೆ.

ಹೌದು ಬಹುಕೋಟಿ ವೆಚ್ಚದ ‘ವೇದ’ ಚಿತ್ರಕ್ಕೆ ನಾಯಕಿಯಾಗಿ ಹೀರೋ ಸಿನಿಮಾದ ನಾಯಕಿ ಗಾನವಿ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ. ಇದೀಗ ಶಿವಣ್ಣನ ಜೋಡಿಯಾಗಿ ಲೀಡ್ ರೋಲಲ್ಲಿ ನಟಿಸ್ತಿದ್ದಾರೆ.ಟಿ.ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕಿ ಜಾನಕಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಗಾನವಿ ಲಕ್ಷ್ಮಣ್ ಹಿರಿತೆರೆಯಲ್ಲಿ ರಿಷಬ್​ ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದ ಹೀರೋ ಸಿನಿಮಾ  ಗಾನವಿ ಗೆ ಸಾಕಷ್ಟು ಹೆಸರು ತಂದುಕೊಟ್ಟಿತು,ಮತ್ತು  ಗಿರೀಶ್ ಕುಮಾರ್ ನಿರ್ದೇಶನದ ಭಾವಚಿತ್ರ ಸಿನೆಮಾದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ ಗಾನವಿ, ಚಿತ್ರ ಇನ್ನೇನು ರಿಲೀಸ್ ಹಂತದದಲ್ಲಿರುವಾಗಲೇ, ವೇದ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಗಾನವಿ.

ಶಿವರಾಜ್ ಕುಮಾರ್ ರವರ ಹೋಮ್ ಬ್ಯಾನರ್ ‘ಗೀತಾ ಪಿಕ್ಚರ್ಸ್’ನಲ್ಲಿ ತಯಾರಾಗುತ್ತಿರುವ ಮೊಟ್ಟ ಮೊದಲ ಸಿನಿಮಾ ‘ವೇದ’. ”ಶಿವಣ್ಣ ರವರ 125ನೇ ಸಿನಿಮಾ ಇದು.ಈ ಮೂಲಕ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸುದ್ದಿ ಈಗಾಗಲೆ ಎಲ್ಲರಿಗೂ ತಿಳಿದ ವಿಷಯ.

‘ವೇದ’ ಚಿತ್ರದ ಫಸ್ಟ್ ಲುಕ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ‘ವೇದ’ ಚಿತ್ರದ ಕುರಿತು ಮತ್ತಷ್ಟು ಅಪ್ಡೇಟ್ಸ್ ಹೊರಬರಬೇಕಿದೆ.

****

Written By
Kannadapichhar

Leave a Reply

Your email address will not be published. Required fields are marked *