ಅಪ್ಪು ಮನೆಗೆ ತಮಿಳುನಾಡು ಸಿ.ಎಂ ಪುತ್ರ ಉದಯನಿಧಿ ಸ್ಟಾಲಿನ್ ಭೇಟಿ
ಪುನೀತ್ ರಾಜಕುಮಾರ್ ಸಾವು ಅಸಂಖ್ಯಾತ ಅಭಿಮಾನಿಗಳನ್ನು ಕಾಡುವುದರ ಜೊತೆಗೆ ದಕ್ಷಿಣ ಭಾರತದ ಚಿತ್ರರಂಗದ ಕಲಾವಿದರನ್ನು ನೋವಿಗೆ ತಳ್ಳಿದೆ. ಈಗಾಗಲೇ ತಮಿಳು ಚಿತ್ರರಂಗದ ಹಲವಾರು ಸ್ಟಾರ್ಸ್ ಪುನೀತ್ ರಾಜಕುಮಾರ್ ಸಮಾಧಿಗೆ ಬಂದು ನಮಿಸಿ ದೊಡ್ಮನೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.
ಇಂದಿಗೆ ಪುನೀತ್ ರಾಜಕುಮಾರ್ ತೀರಿಕೊಂಡು 12ನೇ ದಿನ ಅಣ್ಣಾವ್ರ ಕುಟುಂಬವು ಅಪ್ಪು ಹೆಸರಿನಲ್ಲಿ ಅಭಿಮಾನಿಗಳಿಗೆ ಅನ್ನದಾನ ಮಾಡಿದೆ. ಇವತ್ತು ಕೂಡ ಹಲವಾರು ಗಣ್ಯರು ಪುನೀತ್ ರಾಜಕುಮಾರ್ ಮನೆಗ ಭೇಟಿ ನೀಡುತ್ತಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶಿವಣ್ಣನ ಮನೆಗೆ ಭೆಟಿ ನೀಡಿ ಸಾಂತ್ವನ ಹೇಳಿದ್ದಾರೆ.
“ತುಂಬ ನೋವಾಗಿದೆ , ನಮ್ಮ ಜೊತೆ ಸರ್ ತುಂಬ ಚೆನ್ನಾಗಿದ್ರು.ಈ ವಯಸ್ಸಿನಲ್ಲಿ ಅವರು ಹೋಗಬಾರದಿತ್ತು. ದೇವರು ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ. ಕನ್ನಡ ಇಂಡಸ್ಟ್ರಿಗೆ ಈ ಸಾವು ತುಂಬ ನಷ್ಟ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ದಿ. ಕರುಣಾನಿಧಿ ಅವರ ಕುಟುಂಬ ಮತ್ತು ಡಾ ರಾಜಕುಮಾರ್ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಮೊದಲಿನಿಂದಲೂ ಇತ್ತು, ಮೇಲಾಗಿ ಸ್ಟಾಲಿನ್ ಮತ್ತು ಶಿವಣ್ಣ ಚೆನೈನಲ್ಲಿ ಒಂದೇ ಶಾಲೆಯ ಸ್ನೇಹಿತರಾಗಿದ್ದವರು, ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್ ಅವರ ಪಕ್ಷ ಜಯಗಳಿಸಿ ಸ್ಟಾಲಿನ್ ಅಧಿಕಾರ ವಹಿಸಿಕೊಂಡಾಗ ಶಿವಣ್ಣ ಸ್ಟಾಲಿನ್ ಗೆ ಶುಭಾಶಯ ತಿಳಿಸಿ ಅಭಿನಂದಿಸಿದ್ದರು.
****