ಪುನೀತ್ ಅಂತಹ ವ್ಯಕ್ತಿ ಮತ್ತೊಬ್ಬರಿಲ್ಲ: ನಟ ಸಿದ್ದಾರ್ಥ್
ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಬಳಗ ದೊಡ್ಡದು, ಅವರ ವ್ಯಕ್ತತ್ವಕ್ಕೆ ಮಾರುಹೋಗದವರಿಲ್ಲಾ, ಆ ಸಾಲಿಗೆ ತಮಿಳು ನಟ ಸಿದ್ದಾರ್ಥ್ ಕೂಡ ಸೇರುತ್ತಾರೆ. ಪುನೀತ್ ನಿಧನರಾಗಿ ಇಂದಿಗೆ (ನ.8) 11 ದಿನವಾಗಿದ್ದು, ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ತಮಿಳು ನಟ ಸಿದ್ದಾರ್ಥ್ ಕೂಡ ಅಪ್ಪು ಸಮಾಧಿಗೆ ನಮನ ಸಲ್ಲಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಪುನೀತ್ ಅವರ ವ್ಯಕ್ತತ್ವ ನೆನೆದು ಕಣ್ಣೀರಾಕ್ಕಿದ್ದಾರೆ.
‘ಇಂದು ಅಪ್ಪು ಇಲ್ಲದೇ 11 ದಿನ ಆಗಿದೆ. ಆದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ಇಲ್ಲ ಎಂಬುದನ್ನು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ಅವರು ಇದ್ದಾರೆ, ಯಾವಾಗಲೂ ಇರುತ್ತಾರೆ ಎನ್ನುತ್ತೇನೆ. ಅವರದ್ದು ಮಹಾನ್ ವ್ಯಕ್ತಿತ್ವ. ತುಂಬ ಪ್ರತಿಭಾವಂತ. ಪ್ರತಿ ಬಾರಿ ಅವರನ್ನು ಭೇಟಿ ಆದಾಗಲೂ ನಾನು ಲಕ್ಕಿ ಎಂದುಕೊಳ್ಳುತ್ತಿದ್ದೆ. ಅವರು ಎಲ್ಲರ ಕಾಳಜಿ ವಹಿಸುತ್ತಿದ್ದರು. ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಪುನೀತ್ ರೀತಿ ಇನ್ನೋರ್ವ ವ್ಯಕ್ತಿ ಇರಲು ಸಾಧ್ಯವಿಲ್ಲ. ಕುಟುಂಬದವರಿಗೆ, ಕೋಟ್ಯಂತರ ಅಭಿಮಾನಿಗಳಿಗೆ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ನಾನು ಕೂಡ ಪುನೀತ್ ರಾಜ್ಕುಮಾರ್ ಫ್ಯಾನ್’ ಎಂದಿದ್ದಾರೆ ಸಿದ್ದಾರ್ಥ್.
****