News

‘ರಜಿನಿ’ಯ ಅಣ್ಣಾತ್ತೆ ಭರ್ಜರಿ ರಿಲೀಸ್.. ಪ್ರೇಕ್ಷಕರಿಗೆ ‘ಅಪ್ಪು ಗಿಡ’ ವಿತರಣೆ.‌.

‘ರಜಿನಿ’ಯ ಅಣ್ಣಾತ್ತೆ ಭರ್ಜರಿ ರಿಲೀಸ್.. ಪ್ರೇಕ್ಷಕರಿಗೆ ‘ಅಪ್ಪು ಗಿಡ’ ವಿತರಣೆ.‌.
  • PublishedNovember 4, 2021

ತಲೈವಾ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಬಹು ನಿರೀಕ್ಷೆಯ ‘ಅಣ್ಣಾತ್ತೆ ಇಂದು ರಿಲೀಸ್ ಆಗಿದೆ, ಬೆಂಗಳೂರಿನ ಥಿಯೇಟರ್ ಒಂದರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿಗಾಗಿ ಶೋ ಗೆ ಬಂದಂತಹ ಪ್ರೇಕ್ಷಕರಿಗೆ ಅಪ್ಪು ಹೆಸರಿನಲ್ಲಿ ಗಿಡಗಳನ್ನು ವಿತರಿಸುವ ಮೂಲಕ ಗೌರವ ಸಮರ್ಪಿಸಿದ್ದಾರೆ. ರಜಿನಿಕಾಂತ್ ದೊಡ್ಮನೆಯೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ನಟ ಮಿಗಿಲಾಗಿ ಕನ್ನಡದವರೂ ಕೂಡ ಹಾಗಾಗಿ ಅವರ ಅಭಿಮಾನಿಗಳು ಇಂದು ಗಿಡಗಳನ್ನು ವಿತರಿಸಿ ಅಗಲಿದ ಅಪ್ಪು ಅವರನ್ನು ಸ್ಮರಿಸಿದ್ದಾರೆ.

ರಜಿನಿಯ ಬಹುನಿರೀಕ್ಷಿತ ಚಿತ್ರ ‘ಅಣ್ಣಾತೆ’ ಇಂದು ಎಲ್ಲೆಡೆ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಇದು ಫ್ಯಾನ್ಸ್​​ಗೆ ದೀಪಾವಳಿಯ ಸಂಭ್ರಮದ ಜೊತೆಗೆ, ರಜಿನಿ ಹಬ್ಬದ ಸಂಭ್ರಮವನ್ನೂ ತಂದಿದೆ. ಅಭಿಮಾನಿಗಳು ಚಿತ್ರಮಂದಿರದ ಸುತ್ತ ಅಕ್ಷರಶಃ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಾ ಕಡೆ ಬೆಳಗ್ಗೆ 8 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗಿದ್ದು, ಎಲ್ಲಾ ಚಿತ್ರಮಂದಿರದಲ್ಲೂ ಮಾರ್ನಿಂಗ್ ಶೋ ಟಿಕೇಟ್ಸ್ ಸೋಲ್ಡ್ ಔಟ್ ಆಗಿದೆ. ಪ್ರಪಂಚದಾದ್ಯಂತ 1200ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಅಣ್ಣಾತೆ ರಿಲೀಸ್ ಆಗಿದ್ದು, ವಿಂಟೇಜ್ ರಜಿನಿಯ ದರ್ಶನಕ್ಕೆ ಅಭಿಮಾನಿಗಳು ಕಾದಿದ್ದಾರೆ. ರಜಿನಿಯ ಈ ಹಿಂದಿನ ‘ಮುತ್ತು’, ‘ಪಡಿಯಪ್ಪ’, ‘ಅರುಣಾಚಲಂ’ ಮೊದಲಾದ ಚಿತ್ರಗಳಂತೆ ‘ಅಣ್ಣಾತೆ’ ಮೂಡಿಬಂದಿರುವುದರಿಂದ ನಿರೀಕ್ಷೆ ಇಮ್ಮಡಿಯಾಗಿದೆ.

ರಜಿನಿಯ ಈ ಹಿಂದಿನ ಚಿತ್ರ ‘ದರ್ಬಾರ್’ ಬಿಡುಗಡೆಯಾಗಿದ್ದು ಒಂದೂವರೆ ವರ್ಷದ ಹಿಂದೆ. ಬರೋಬ್ಬರಿ 19 ತಿಂಗಳುಗಳ ನಂತರ ‘ಅಣ್ಣಾತೆ’ಯ ಮುಖಾಂತರ ರಜಿನಿ ಕಮ್​ಬ್ಯಾಕ್ ಮಾಡಿದ್ದು, ಫ್ಯಾನ್ಸ್​​ಗೆ ಸಂತಸ ತಂದಿದೆ. ಅಣ್ಣಾತೆ ಚಿತ್ರದಲ್ಲಿ ಕೀರ್ತಿಸುರೇಶ್ , ನಯನತಾರ, ಪ್ರಕಾಶ್ ರೈ, ಜಗಪತಿಬಾಬು, ಖುಷ್ಬೂ, ಮೀನಾ ಮೊದಲಾದ ಖ್ಯಾತ ತಾರೆಯರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದು, ಸನ್ ಪಿಕ್ಚರ್ಸ್ ನಿರ್ಮಿಸಿದೆ.

****

Written By
Kannadapichhar

Leave a Reply

Your email address will not be published. Required fields are marked *