News

ಶಿವಣ್ಣನ ಮನೆಗೆ ಬಂದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ

  • PublishedAugust 11, 2021

‘ಬಿಗ್ ಬಾಸ್’ ಮನೆಯ ಸೀಸನ್ 8ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಗ್ರಾಮೀಣ ಪ್ರತಿಭೆ ಮಂಜು ಪಾವಗಡ. ಬಿಗ್ ಬಾಸ್ ಮನೆಯಲ್ಲಿದ್ದಾಗ, ‘ಶಿವಣ್ಣ ಅಂದ್ರೆ ನನಗೆ ತುಂಬಾ ಇಷ್ಟ..’ ಎಂದು ಮಂಜು ಹೇಳಿಕೊಂಡಿದ್ದರು ಮಂಜು. ಇದೀಗ ವಿನ್ನರ್ ಆಗಿರುವ ಅವರು, ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ನಾಗವಾರದಲ್ಲಿರುವ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ತಾವು ಗೆದ್ದಿರುವ ಟ್ರೋಫಿ ತೋರಿಸಿ, ಶಿವಣ್ಣ ಅವರ ಕಡೆಯಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.


ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಶಿವಣ್ಣ ನ ಮನೆಯಲ್ಲಿ

ಮಂಜು ಗೆಲುವಿಗೆ ಶುಭಾಶಯಗಳನ್ನು ತಿಳಿಸಿದ ಶಿವರಾಜ್‌ಕುಮಾರ್, ‘ನೀವು ವಿನ್ ಆಗಿದ್ದು ನನಗೆ ಬಹಳ ಖುಷಿ ನೀಡಿದೆ. ಎಲ್ಲ ದೇವರ ಆಶೀರ್ವಾದ’ ಎಂದು ಹೇಳಿದ್ದಾರೆ. ಮಂಜುಗೆ ಸಿಹಿ ತಿನ್ನಿಸಿ, ಆಶೀರ್ವಾದ ಮಾಡಿದರು. ಸದ್ಯ ಈ ಫೋಟೋ ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.

****

Written By
Kannadapichhar

Leave a Reply

Your email address will not be published. Required fields are marked *