new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ನೈಜ್ಯ ಘಟನೆ ಆಧರಿತ ಆಲ್ಬಮ್ ‘ಕಾಲ ಹಾರುತ್ತದೆ’

ನೈಜ್ಯ ಘಟನೆ ಆಧರಿತ ಆಲ್ಬಮ್ ‘ಕಾಲ ಹಾರುತ್ತದೆ’
  • PublishedJuly 25, 2026

ಸಿನಿಮಾರಂಗದಲ್ಲಿ ನೈಜ್ಯ ಘಟನೆಗಳನ್ನು ಆಧರಿಸಿದ ಅನೇಕ ಚಿತ್ರಗಳನ್ನ ನೋಡಿಕೊಂಡು ಬಂದಿದ್ದೇವೆ. ಆದರೆ ಆಲ್ಬಮ್ ಸಾಂಗ್ ಎಂದಾಗ ಈ ರೀತಿಯ ಪ್ರಯತ್ನಗಳು ವಿರಳ. ಇದೀಗ ವಿಶೇಷ ಎನ್ನುವಂತೆ ಒಂದು ನೈಜ್ಯ ಘಟನೆಯನ್ನು ಆಧರಿಸಿರುವ ‘ಕಾಲ ಹಾರುತ್ತದೆ’ ಎನ್ನುವ ವಿಡಿಯೋ ಆಲ್ಬಮ್ ಹಾಡು ಬಿಡುಗಡೆಯಾಗಲು ರೆಡಿಯಾಗಿದೆ.

ಸುಮಾರು 4.39 ನಿಮಿಷದ ಈ ವಿಡಿಯೋ ಆಲ್ಬಮ್ ಅನ್ನು ಬ್ಲಾಕ್ ಶಿಪ್ ಚಿತ್ರವನ್ನು ನಿರ್ಮಾಪಣೆ ಮಾಡಿರುವಂತಹ ಅಶ್ವಿನಿ ಗುರು ಚರಣ್ ಅವರು ನಿರ್ಮಾಣ ಮಾಡಿದ್ದಾರೆ.ಇನ್ನು ಈ ಹಾಡಿನಲ್ಲಿ ಮುಖ್ಯ ಭೂಮಿಯಲ್ಲಿ ಚಿತ್ರ ನಿರ್ದೇಶಕ, ನೃತ್ಯ ಸಂಯೋಜಕ, ಸಾಹಿತಿ ಜೊತೆಗೆ ಫಿಟ್ನೆಸ್ ಟ್ರೈನರ ಜೀವನ್ ಹಳ್ಳಿಕರ್ ನಾಯಕನಾಗಿ ಕಾಣಿಸಿಕೊಂಡಿದ್ದು ಇವರ ಜೊತೆಗೆ ಅವರಿಗೆ ಜೋಡಿಯಾಗಿ ರಂಗಭೂಮಿ ಕಲಾವಿದೆ ಹರಿತಾ ಷಾ ಕಾಣಿಸಿಕೊಳ್ಳಲಿದ್ದಾರೆ.ಈ ಹಾಡನ್ನು ಜೀವನ್ ಹಳ್ಳಿಕರ್ ಯೂಟ್ಯೂಬ್ ಚಾನಲ್ನಲ್ಲಿ ನೋಡಬಹುದಾಗಿದೆ.

ಇನ್ನು ಈ ಹಾಡಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಿರ್ದೇಶಕರು “ಕೆಲವು ವಿಚಾರಗಳನ್ನ ಮರೆತಾಗ , ಖುಷಿ ಕೊಟ್ಟಾಗ ಸಂಗೀತವು ಮನಸ್ಸಿಗೆ ಹಿತವನ್ನು ನೀಡುತ್ತದೆ .ಅದೇ ರೀತಿಯ ಸಾಂಗ್ ಇದಾಗಿದೆ. ಈ ಹಾಡಿನಲ್ಲಿ ನನ್ನ ಸ್ನೇಹಿತನ ಜೀವನದಲ್ಲಿ ನಡೆದಂತಹ ಸಂಗತಿಗಳನ್ನು ಬಳಸಿಕೊಂಡಿದ್ದೇನೆ ಎಂದು ಹೇಳಿದ ಅವರು ಈ ಹಾಡನ್ನು ತನ್ನ ಗೆಳೆಯನಿಗೆ ಅರ್ಪಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ಈ ಹಾಡನ್ನು ಸಿದ್ದಾರ್ಥ್ ಕಾಮತ್ ಮತ್ತು ಸ್ಪರ್ಶ ಆರ್ . ಕೆ ಹಾಡಿದ್ದು ಅಯಾಂಕ್ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿದೆ ಸಂಕಲನವನ್ನು ಆಕಾಶ್ ಎಸ್ ಮಹೇಂದ್ರಕರ್ ಮಾಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *