ಉಪ್ಪಿ ಮೆಚ್ಚಿದ ‘ಕೆಡಿ’ ದಿ ಡೆವಿಲ್…!
ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’: ದಿ ಡೆವಿಲ್ ಏಪ್ರಿಲ್ 30 ರಂದು ರಾಜ್ಯದಾದ್ಯಂತ ಯಶಸ್ವಿ ಬಿಡುಗಡೆ ಕಂಡಿತು.
ಸಿನಿಮಾ ಬಿಡುಗಡೆ ಕಂಡ ಒಂದೇ ದಿನಕ್ಕೆ ಬರೋಬ್ಬರಿ 23.7 ಕೋಟಿ ರೂ. ನಷ್ಟು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿತ್ತು. ದೊಡ್ಡ ತಾರಬಳಗವಿರುವ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಕಲಾವಿದರಾದ ಸಂಜಯ್ ದತ್ ಹಾಗೂ ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಇರುವುದು ಇನ್ನಷ್ಟು ಮೆರುಗನ್ನು ಹೆಚ್ಚಿಸಿದೆ.
ಇದೀಗ ನಿನ್ನೆ( ಮೇ. 2) ರಂದು ‘ಕೆಡಿ’ ಚಿತ್ರ ನೋಡಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಸಿನಿಮಾದ ಬಗ್ಗೆ ಮಾಧ್ಯಮದೊಂದಿಗೆ ತಮ್ಮ ಅನಿಸಿಕೆಯನ್ನ ಹೇಳಿಕೊಂಡಿದ್ದಾರೆ.
ಪಕ್ಕ ಮಾಸ್ ಸಿನಿಮಾ
“ಪ್ರತಿ ಸೀನ್ ಇಷ್ಟ ಪಟ್ಟು ಮಾಡಿದರೆ, ಧ್ರುವ ಈ ಸಿನಿಮಾಗೆ ಲೈಫ್ ಕೊಟ್ಟಿದ್ದಾರೆ. ಪೂರ್ತಿ ಕಿರಿಚಾಡಿಕೊಂಡು ಶಿಳ್ಳೆ ಹೊಡ್ಕೊಂಡು ನೋಡ್ಬೇಕು ಆ ರೀತಿಯ ಸಿನಿಮಾ ಎಲ್ಲಾ ಪೀಕ್ ಅಲ್ಲಿದೆ” ಎಂದು ಅನುಭವವನ್ನು ಹಂಚಿಕೊಂಡಿದ್ದಾರೆ.