ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳದೆ ಸುಮಾರು ವರ್ಷಗಳೇ ಆಯ್ತು.ತಮ್ಮ ಮದುವೆ ಆದ ಮೇಲೆ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡ ಆವೊಂದು ಸಿನಿಮಾಗೆ ಶುಭ ಹಾರೈಸಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮೋಡ ಕವಿದ ವಾತಾವರಣ’ದ ಹೊಸ ಸಾಂಗ್ ‘ಯಯಾತಿ ಯಯಾತಿ’ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡುತ್ತಿದೆ.ಈ ಹಾಡನ್ನು ಸುನಿಲ್ ಅವರು ಬರೆದಿದ್ದು, ಸಂಗೀತಾ ರವೀಂದ್ರ, ಚೇತನ್ ನಾಯಕ್ ಧನಿಯಾಗಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿಯವರು ಯಯಾತಿ ಯಯಾತಿ ಹಾಡಿನ ಲಿಂಕ್ ಶೇರ್ ಮಾಡಿ “ಬಗೆದಷ್ಟು ಬಾಂಧವ್ಯ ಮೊಗೆದಷ್ಟು ರಸಕಾವ್ಯ ಸವಿಯೋಣ ಬಾ ಶೃಂಗಾರ ಇಟ್ಟಷ್ಟು ಚುಕ್ಕಿಯ ಎಳೆದಷ್ಟು ರೇಖೆಯ ರಂಗೋಲಿ ವ್ಯಯಾರ ನೋಡಿ ಹಂಚಿ ಹರಸಿ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಶ್ಮಿಕಾ “ಸುನಿಲ್ ಸರ್ ಹಾಗೂ ಮೋಡ ಕವಿದ ವಾತಾವರಣ ಸಿನಿಮಾದ ಇಡೀ ತಂಡಕ್ಕೆ ಶುಭವಾಗಲಿ” ಎಂದು ಬರೆದು ಹಂಚಿಕೊಂಡಿದ್ದಾರೆ.

ಸಿಂಪಲ್ ಸುನಿಯವರು ರಶ್ಮಿಕಾ ಮಂದಣ್ಣ ಹಾಗೂ ಗಣೇಶ್ ಅವರು ನಟಿಸಿರುವ ಹಿಟ್ ಮೂವಿ ಚಮಕ್ ಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *