ಇನ್ಮೇಲೇನಿದ್ರು ಯಶ್ ದೇ ಆರ್ಭಟ…!
ರಾಕಿಂಗ್ ಸ್ಟಾರ್ ಯಶ್,ವಿಶ್ವವೇ ಕನ್ನಡ ಸಿನಿಮಾ ರಂಗವನ್ನ ತಿರುಗಿ ನೋಡುವಂತೆ ಮಾಡಿದ ಸೂಪರ್ ಸ್ಟಾರ್.ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ನಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ನೀಡಿದ ಮಾಸ್ಟರ್ ಮೈಂಡ್.ಇವರನ್ನ ಮತ್ತೆ ತೆರೆಯ ಮೇಲೆ ನೋಡಬೇಕು ಎನ್ನುವ ಆಸೆಯಿಂದ ಯಶ್ ಅಭಿಮಾನಿಗಳು ಸುಮಾರು 3 ವರ್ಷದಿಂದ ಕಾಯ್ತಾ ಇದ್ದಾರೆ.
ಆದರೆ ಎರಡು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಯಶ್ ಈ ವರ್ಷ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷ್ಯ. ಎರಡು ಸಿನಿಮಾಗಳ ಜತೆ ಮತ್ತೆ ತೆರೆ ಮೇಲೆ ರಾರಾಜಿಸೋಕೆ ಮಾಸ್ಟರ್ ಪೀಸ್ ರೆಡಿ ಆಗಿ ನಿಂತಿದ್ದಾರೆ.
ಒಂದು ಕಡೆ ಟೈಟಲ್ ರಿಲೀಸ್ ನಿಂದ ಇಲ್ಲಿಯವರೆಗೂ ಸೌಂಡ್ ಮಾಡ್ತಿರೋ ‘ಟಾಕ್ಸಿಕ್’, ಆದ್ರೆ ಮತ್ತೊಂದು ಕಡೆ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ.ಎರಡು ಈ ವರ್ಷದ ಬಹು ನಿರೀಕ್ಷಿತ ಸಿನಿಮಾ.ಅದರಲ್ಲೂ ರಾಮಾಯಣದಲ್ಲಿ ರಾವಣನಾಗಿ ಮಿಂಚುತ್ತಿರುವ ಯಶ್ ಅನ್ನು ನೋಡಲು ಜನರು ಕಾಯುತ್ತಿದ್ದಾರೆ. ಹೀಗೆ ನೋಡಿದಾಗ ಈ ವರ್ಷವನ್ನು ಯಶ್ ವರ್ಷ ಎಂದು ಹೇಳಿದರು ತಪ್ಪಾಗಲ್ಲ.