ಪಿಚ್ಚರ್ stories ಪಿಚ್ಚರ್ UPDATE

ಸುದೀಪ್​​ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು; ರಜತ್ ವಿನಯ್

ಸುದೀಪ್​​ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು; ರಜತ್ ವಿನಯ್
  • PublishedMarch 10, 2026


ನಟ ಸುದೀಪ್ ಅವರ ಡಾಗ್ ವಿರುದ್ಧ ಸತೀಶ್ ಟೀಕೆ ಮಾಡುತ್ತಲೇ ಇದ್ದಾರೆ.. ಇದಕ್ಕೆ ರಜತ್ ಹಾಗೂ ವಿನಯ್ ಸುದೀಪ್ ಅವರ ಪರವಾಗಿ ನಿಂತಿದ್ದಾರೆ. ಇವರ ವಿರುದ್ಧ ಸತೀಶ್ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಜತ್, ಸುದೀಪ್ ಬಗ್ಗೆ ಕೆಟ್ಟದಾಗಿ ಯೋಚಿಸುವ ಮೊದಲು ಯಮ ಕಿಂಕರರನ್ನು ದಾಟಬೇಕು ಎಂದು ಜೋಡೆತ್ತು ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಜೊತೆಗಿನ ಫೋಟೋ ಹಂಚಿಕೊಂಡು, ತಾವು ಸದಾ ಕಿಚ್ಚನ ಬೆಂಬಲಕ್ಕೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಹಾಕಿದ್ದಲ್ಲದೆ, ದಾದಾ ಯಾರ್ ಗೊತ್ತಾ ಹಾಡನ್ನು ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನಂತರ ಸತೀಶ್ ಅವರನ್ನು ರಜತ್ ಪ್ರಶ್ನೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯನ್ನು ಸಹ ನೀಡಿದ್ದರು. ಅಲ್ಲದೆ, ವಿನಯ್ ಕೂಡ ರಜತ್ ಬೆಂಬಲಕ್ಕೆ ನಿಂತು, ಸತೀಶ್​​ಗೆ ಎಚ್ಚರಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ರಜತ್ ಹಾಗೂ ವಿನಯ್ ಮೇಲೆ ಕೇಸ್ ಹಾಕಿದ್ದಾರೆ.
ಈ ಬೆನ್ನಲ್ಲೇ ಪೋಸ್ಟ್ ಮಾಡಿರೋ ರಜತ್ ಅವರು, ನಮ್ಮ ಬಾದ್​​ಶಾ ಕಿಚ್ಚ ಸರ್ ಬಗ್ಗೆ ಮಾತಾಡೋದು ಅಲ್ಲ, ಕೆಟ್ಟದಾಗಿ ಯೋಚನೆ ಮಾಡ್ಬೇಕು ಅಂದರೂನೂ ಈ ಯಮ ಕಿಂಕರರನ ಮೊದಲು ದಾಟಬೇಕು. ವಿ ಲವ್​ ಯೂ ಸರ್ ಎಂದು ಸುದೀಪ್ ಜೊತೆ ಇರೋ ಫೋಟೋನ ವಿನಯ್ ಹಾಗೂ ರಜತ್ ಕೊಲಾಬ್ರೇಷನ್ ಮಾಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *