ಯಾರ್ರೀ ‘ರಕ್ಕಸಪುರದೋಳ್’ ವಿಲನ್?
ರಕ್ಕಸಪುರದೋಳ್ ರಾಜ್ ಬಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಸಿರುವ ಸಿನ್ಮ ಅನೇಕ ವಿಚಾರಗಳಿಗೆ ಸದ್ದು ಮಾಡುತ್ತಿದೆ. ಕಥೆ, ಸಿನಿಮಾಟೋಗ್ರಫಿ, ನಟನೆ ಆದ್ರೆ ಇದೆಲ್ಲದಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವುದು ವಿಲನ್ ಪಾತ್ರದ ಬಗ್ಗೆ.ಹೌದು. ಯಾರ್ರೀ ಆ ವಿಲ್ಲನ್? ಏನ್ ಸೈಕ್ ಆಕ್ಟಿಂಗ್ ಅಂತೆಲ್ಲಾ ಜನ ಹೊಗಳುತ್ತಿರುವ ಆ ನಟ ಯಾರು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
ಈ ಆದಿ ಪಾತ್ರವನ್ನು ಮಾಡಿರುವ ನಟನ ಹೆಸರು ಅನಿರುದ್ಧ ಭಟ್ ಮೂಲತಃ ದಕ್ಷಿಣ ಕನ್ನಡದ ಸುಳ್ಯದವರು. ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಮಾಡಿರುವ ಇವರಿಗೆ ಆಕ್ಟಿಂಗ್ ಮೇಲೆ ಒಲವು ಇತ್ತು. ಅನೇಕ ಶಾರ್ಟ್ ಫಿಲಂ ಗಳಲ್ಲಿ ನಟನೆ ಮಾಡಿದ್ದಾರೆ.
ಅನಿರುದ್ಧ ಅವರು ರಕ್ಕಸಪುರದೋಳ್ ಮಾಡುವ ಮೊದಲು ಡಾಲಿ ಧನಂಜಯ ಅವರ ಹೊಯ್ಸಳ ಸಿನ್ಮಾ, ರಾಜ್ ಬಿ. ಶೆಟ್ಟಿಯವರ ‘ಸ್ವಾತಿ ಮುತ್ತಿನ ಮಳೆ’ ಮತ್ತು ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ನಟನೆ ಮಾಡಿದ್ದರು. ಇದು ಅವರ 4 ನೇ ಸಿನಿಮಾ ಆಗಿದೆ.ರಕ್ಕಸಪುರದೊಳ್ ಸಿನ್ಮ ರಾಜ್ ಅವರ ಜೊತೆಗೆ ಮಾಡುತ್ತಿರುವ ಎರಡನೇ ಸಿನಿಮಾ.
ಇದರ ಜೊತೆಗೆ ಇವರ ಪಾತ್ರವನ್ನು ಇಷ್ಟ ಪಟ್ಟಿರುವ ಸಿನಿಮಾ ಪ್ರಿಯರು ಇನ್ನು ಹೆಚ್ಚಿನ ಅವಕಾಶಗಳು ಇಂತಹ ಪ್ರತಿಭೆಗೆ ದೊರಕಲಿ ಎಂದು ಹಾರೈಸಿದ್ದಾರೆ.