new updates News ಪಿಚ್ಚರ್ stories ಪಿಚ್ಚರ್ UPDATE

ಬೆಂಗಳೂರು ಚಲನಚಿತ್ರೋತ್ಸವ ಇಂದು ಈ 10 ಚಿತ್ರ ಮಿಸ್ ಮಾಡ್ಕೊಬೇಡಿ;

ಬೆಂಗಳೂರು ಚಲನಚಿತ್ರೋತ್ಸವ ಇಂದು ಈ 10 ಚಿತ್ರ ಮಿಸ್ ಮಾಡ್ಕೊಬೇಡಿ;
  • PublishedJanuary 31, 2026

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಸ್ತ್ರೀ ಎಂದರೇ ಅಷ್ಟೇ ಸಾಕೆ ಎಂಬ ಥೀಮ್​​ನಲ್ಲಿ ಈ ಬಾರಿ ಹಲವು ಚಿತ್ರಗಳು ಪ್ರದರ್ಶನ ಆಗುತ್ತಿವೆ. ದೇಶ-ವಿದೇಶದ 225ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇಂದು ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀವು ವೀಕ್ಷಿಸಬಹುದು..

ಹೌದು.. ವಾರ್ತಾ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿ ಸಹಯೋಗದೊಂದಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಫೆಬ್ರವರಿ 6ರವರೆಗೂ ಸಿನಿಮಾಗಳು ಪ್ರದರ್ಶನ ಆಗಲಿವೆ. ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್‍ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ಇಂದು ಲುಲು ಮಾಲ್​ನಲ್ಲಿ ಈ 10 ಬೆಸ್ಟ್ ಸಿನಿಮಾಗಳನ್ನು ಸಿನಿಮಾಸಕ್ತರು ನೋಡಬಹುದು.
ಕ್ಲಿಯೋ ಫ್ರಮ್ 5 ಟು 7: ಸಮಯ ಮಧ್ಯಾಹ್ನ 3:20, ಸ್ಕ್ರೀನ್ 1 ಅಗ್ನೆಸ್ ವಾರ್ದಾ ಅವರ ಈ ಅದ್ಭುತ ಚಿತ್ರವು ಕ್ಯಾನ್ಸರ್ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಗಾಯಕಿಯೊಬ್ಬಳ ಜೀವನದ ಎರಡು ಗಂಟೆಗಳ ಆತಂಕವನ್ನು ನೈಜ ಸಮಯದಲ್ಲಿ ಚಿತ್ರಿಸುತ್ತದೆ.ಒಂದಾನೊಂದು ಕಾಲದಲ್ಲಿ ಸಮಯ ರಾತ್ರಿ 7. ಓಪನ್ ಏರ್ ಸ್ಕ್ರೀನಿಂಗ್ -ಮುಖ್ಯ ದ್ವಾರವಿವರ ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರವು ಸಮುರಾಯ್ ಮಾದರಿಯ ಕನ್ನಡದ ಆ್ಯಕ್ಷನ್ ಸಿನಿಮಾ, ದಿ ಮೇಡ್ಸ್ ಆಫ್ ವಿಲ್ಕೊ, ತಾಯಿ ಸಾಹೇಬ, ಮದರ್‌ಟಂಗ್, ಗಮನ್, ಭವನಿ ಭವಾಯಿ, ಆಕ್ಸಿಡೆಂಟ್, ವಾಸ್ತುಹಾರ, ಎಲ್ಫ್ರೀಡ್ ಜೆಲಿನೆಕ್.

Written By
Kannada Picchar

Leave a Reply

Your email address will not be published. Required fields are marked *