‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ನೋಡಿದ ನಾಗತಿಹಳ್ಳಿ ಚಂದ್ರಶೇಖರ್.
ಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ಇತ್ತೀಚೆಗೆ ಬಿಡುಗಡೆಯಾದ ‘ತೀರ್ಥ ರೂಪ ತಂದೆಯವರಿಗೆ ‘ ಚಿತ್ರವನ್ನು ವೀಕ್ಷಿಸಿದ್ದಾರೆ.
ಇದರ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.’ನೀನು ಬರಬೇಡ. ನಿರ್ದೇಶಕ ಬಾಗಿಲಲ್ಲಿ ಟಿಕೆಟ್ ಹಿಡಿದು ನಿಲ್ಲಕೂಡದು. ನಾವು ಹಣ ಕಟ್ಟು ನೋಡುತ್ತೇವೆ. ಅದು ನನ್ನ ಕ್ರಮ. ನಂತರ ನಾನೇ ಕರೆ ಮಾಡಿ ಅಭಿಪ್ರಾಯ ಹೇಳುತ್ತೇನೆ. ಹಣ ಕೊಡದೆ ಅಭಿಪ್ರಾಯ ಕೊಡುವುದು ಸಮಂಜಸವಲ್ಲ ‘ ಎಂದಿದ್ದೆ. ನಾನೂ ಸತ್ಯ ಹೆಗ್ಡೆಯವರೂ ಹೋದೆವು.” ತೀರ್ಥರೂಪ… ” ನೋಡಿದೆವು. ಸೂಕ್ಷ್ಮತೆಯ ಸಧಭಿರುಚಿಯ ಸಿನಿಮಾ.ಹೊಂದಿಸಿ ಬರೆದಿದ್ದ ಜಗನ್ನಾಥ್ ಗೆ ಇಲ್ಲಿಯೂ ಹೊಂದಿಸಿಯೇ ಬರೆಯುವ ಪ್ರಯತ್ನ ಇಷ್ಟವಾಗುವ ಹಲವು ತುಣುಕುಗಳಿವೆ. ಕೊಂಚ ಲಂಬ. ಜಾಹೀರಾತಿನ ಕೊರತೆಯನ್ನು ಜನಪದರೇ ತುಂಬಬೇಕು. ತೆರೆಯನ್ನು ನೆತ್ತರಿನಿಂದಪ್ಪಳಿಸುವ ಪ್ರವಾಹದೆದುರು ಭಾವ, ಜೀವಗಳಿಂದ ಅಲಂಕರಿಸುವ ಜುಳುಜುಳು ಝರಿ ಜಗನ್ನಾಥ. ಕಿರಿಯ ಪ್ರತಿಭೆಗಳನ್ನು ಗಮನಿಸಿ.” ಎಂದು ಬರೆದು ಹಾಕಿ ಕೊಂಡಿದ್ದಾರೆ