new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಇದು ‘ಪಾರ್ಥನ್ ಪರಪಂಚ’:’ಅಣ್ಣಯ್ಯ’ ಈಗ ಪಾರ್ಥ!

ಇದು ‘ಪಾರ್ಥನ್ ಪರಪಂಚ’:’ಅಣ್ಣಯ್ಯ’ ಈಗ ಪಾರ್ಥ!
  • PublishedJanuary 27, 2026

ಚಂದನವನದಲ್ಲಿ ಕೋರ್ಟ್ ಹಾಲ್ ಚಿತ್ರಗಳು ಒಂದು ರೀತಿಯ ವಿಶೇಷ ಸ್ಥಾನವನ್ನೇ ಪಡೆದಿದೆ. ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಸಿನಿಮಾಗಳಾಗಿರಬಹುದು, ವಿಷ್ಣು ದಾದ ಅವರ ಕೋರ್ಟ್ ಆಧಾರಿತ ಸಿನಿಮಾವಾಗಿರಬಹುದು,ಕೋರ್ಟ್ ಸಿನಿಮಾಗಳ ಸಾಲು ಸಾಲು ಪಟ್ಟಿ ನಮ್ಮ ಚಿತ್ರರಂಗದಲ್ಲಿದೆ. ಇದೀಗ ಇದರ ಲಿಸ್ಟ್ ಗೆ ಹೊಸ ಚಿತ್ರವೊಂದು ಸೇರಲು ತಯಾರಾಗುತ್ತಿದೆ.

ಶ್ರೀ ಹರ್ಷ ಎಂ.ಎನ್ ಅವ್ರು ರಚಿಸಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಚಿತ್ರದ ಹೆಸರು ಪಾರ್ಥನ್ ಪರಪಂಚ ಎಂದು ಇಡಲಾಗಿದೆ.ಅಣ್ಣಯ್ಯ ಖ್ಯಾತಿಯ ವಿಕಾಶ್ ಉತ್ತಯ್ಯ, ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೆಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರವು ಸಿರಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೀತಾ ಹರ್ಷವರ್ಧನ್ ಅವರು ನಿರ್ಮಾಪಿಸುತ್ತಿದ್ದಾರೆ.

ಸಿನಿಮಾದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ನಿರ್ದೇಶಕ ಶ್ರೀ ಹರ್ಷ ಚಿತ್ರದ ಬಗ್ಗೆ ಕೆಲವೊಂದು ಮಾಹಿತಿಯನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಪಾರ್ಥನ್ ಪರ ಪಂಚ ಒಂದು ಸಸ್ಪೆನ್ಸ್ ಥ್ರಿಲ್ಲೆರ್ ಆಗಿದ್ದು ರಂಗಾಯಣ ರಘು ಅವ್ರು ಡಿಫನ್ಸ್ ಲಾಯರ್ ಆಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೀತಾ ಅವರು ಅಭಿನಯಿಸಿದ್ದಾರೆ.

ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ನಲ್ಲಿ ಶೂಟಿಂಗ್ ವಿಜಿಟ್ ಹಾಗೂ ಪತ್ರಿಕಾಗೋಷ್ಠಿ ಕೋರ್ಟ್ ಸೆಟ್ ನಲ್ಲಿ ನಡೆಯಿತು.ಕಂಠೀರವ ಸ್ಟುಡಿಯೋದಲ್ಲಿ ಕಂಪ್ಲೀಟ್ ಆಗಿ ಕೋರ್ಟ್ ವಾತವರಣ ನಿರ್ಮಾಣವಾಗಿತ್ತು. ನಾಯಕ ಅಣ್ಣಯ್ಯ ಖ್ಯಾತಿಯ ವಿಕಾಶ್ ಉತ್ತಯ್ಯ ಅಕೆಸ್ಟ್ ಸೀನ್ ಶೂಟ್ ಆಗ್ತಿತ್ತು. ರಂಗಾಯಣ ರಘು ಮತ್ತು ಪುಟ್ಟ ಮಗುವಿನ ಒಂದು ಸೀನ್ ಮತ್ತು ಮಹಿಳೆಯೊಂದಿಗೆ ರಘು ಮಾತನಾಡೋ ಸೀನ್ ಶೂಟ್ ಇತ್ತು ಈ ಟೈಮ್ ನಲ್ಲಿ ಸಿನಿಮಾದ ಹಲವಾರು ಕಲಾವಿದರು ಭಾಗಿಯಾಗಿದ್ರು.

ಇನ್ನು ಒಂದು ಕಡೆ ಅನಂತ್ ಆರ್ಯನ್ ಅವ್ರ ಸಂಗೀತ ನಿರ್ದೇಶನವಾದರೆ,ಜೈ ಆನಂದ್ ಅವ್ರು ಛಾಯಾಗ್ರಾಹಣೆಯನ್ನು ಮಾಡುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *