new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ರಕ್ಕಸಪುರದೋಳ್’ : ಇದು ತನ್ನೊಳಗಿರುವ ರಕ್ಕಸನ ಕಥೆ…!

‘ರಕ್ಕಸಪುರದೋಳ್’ : ಇದು ತನ್ನೊಳಗಿರುವ ರಕ್ಕಸನ ಕಥೆ…!
  • PublishedJanuary 27, 2026

ರಾಜ್ ಬಿ.ಶೆಟ್ಟಿ, ಕನ್ನಡದ ಅದ್ಭುತ ಕಲಾವಿದ. ಇತ್ತೀಚೆಗೆ ಬಿಡುಗಡೆಯಾದ ‘ಲ್ಯಾಂಡ್ ಲಾರ್ಡ್’ ಮೂಲಕ ಖಳ ನಾಯಕನಾಗಿಯೂ ತಾನು ಮಿಂಚಬಹುದು ಎನ್ನುವುದನ್ನು ತೋರಿಸಿಕೊಟ್ಟ ವರ್ಸಟೈಲ್ ಆಕ್ಟರ್. ಇದೀಗ ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವಂತಹ ‘ರಕ್ಕಸಪುರದೋಳ್’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ.

ರವಿ ಸಾರಂಗ ಅವರ ಸಾರಥ್ಯದಲ್ಲಿ ಬಂದಿರುವ ಈ ಸಿನಿಮಾವು,ಕೆ.ಎನ್ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ. ಕೆ ರವಿವರ್ಮ ಅವ್ರು ನಿರ್ಮಾಪಿಸಿದ್ದಾರೆ.

ಚಿತ್ರ ತಂಡವು ಸಿನಿಮಾದ ಟೀಸರ್ ಬಿಡುಗಡೆ ಮಾಡಿದೆ. ಟೀಸರ್ ಪ್ರಕಾರ ಈ ಸಿನಿಮಾವು ಕ್ರೈಂ ಥ್ರಿಲ್ಲರ್ ಸ್ಟೋರಿಯಾಗಿದ್ದು, ಮನುಷ್ಯನ ಒಳಗಿರುವ ದೈತ್ಯನ ಬಗ್ಗೆ ಸುತ್ತುವ ಕಥೆಯಾಗಿದೆ.ಮಾನವನಿಗೆ ಎರಡು ಮುಖಗಳಿದೆ. ಒಂದು ಒಳ್ಳೆಯದಾದರೆ ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಮುಖವೆ ರಕ್ಕಸ. ಸಿನಿಮಾದ ಕಥೆ ವಿಭಿನ್ನ ವಾಗಿದೆ. ಅದರಲ್ಲೂ ಶೆಟ್ರ ಪ್ರತಿಯೊಂದು ಸಿನಿಮಾವು ವಿಶೇಷವಾದ ಅರ್ಥವನ್ನು ಹೊಂದಿರುತ್ತದೆ.ಹಾಗಾಗಿ ಸಿನಿ ಪ್ರೇಕ್ಷಕರು ಟೀಸರ್ ನೋಡಿದ ನಂತರ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದು ಕುತೂಹಲವನ್ನು ಇನ್ನು ಹೆಚ್ಚಾಗುವಂತೆ ಮಾಡಿದೆ.

ರಾಜ್ ಬಿ. ಶೆಟ್ಟಿ ಯವರ ಜೊತೆಗೆ ಅನೇಕ ಕಲಾವಿದರು ನಟಿಸುತ್ತಿದ್ದೂ, ಸಿನಿಮಾದ ಸಾಂಗ್ ಗಳು ಜನರ ಮನಸಿಗೆ ನಾಟಿದೆ.‘ ನೀನಾ ನೀನಾ ‘ ಎನ್ನುವ ಹಾಡಾಗಿರಬಹುದು ಅಥವಾ ಇತ್ತೀಚಿಗಷ್ಟೇ ರಿಲೀಸ್ ಆದ ‘ಸಿದ್ದಯ್ಯ ಸ್ವಾಮಿ ಬನ್ನಿ’ ಎನ್ನುವ ಹಾಡಾಗಿರಬಹುದು ಸಂಗೀತ ಪ್ರಿಯರು ಬಹಳ ಇಷ್ಟ ಪಟ್ಟಿದ್ದಾರೆ. ಜೊತೆಗೆ ಸಿದ್ದಯ್ಯ ಸ್ವಾಮಿ ಬನ್ನಿ ಹಾಡಂತೂ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.

ಇದೀಗ ಚಿತ್ರವು ಇದೇ ಬರುವ ಫೆಬ್ರವರಿ 6 ರಂದು ತೆರೆಗಪ್ಪಳಿಸಲಿದ್ದು, ರಾಜ್ ಬಿ. ಶೆಟ್ಟಿಯವರನ್ನು ಮತ್ತೆ ಸ್ಕ್ರೀನ್ ಮೇಲೆ ಹೊಸ ಪಾತ್ರದಲ್ಲಿ ನೋಡಲು ಜನ ಕಾಯುತ್ತಿದ್ದಾರೆ.‘ಸು ಫ್ರಮ್ ಸೋ’, ’45 ‘ಮತ್ತು ‘ಲ್ಯಾಂಡ್ ಲಾರ್ಡ್’ ಆದ ಬಳಿಕ ಬರುತ್ತಿರುವ ಈ ಸಿನಿಮಾವು ಯಾವ ರೀತಿ ಇರಬಹುದು? ಎನ್ನುವ ಕುತೂಹಲ ಎಲ್ಲರಿಗಿದೆ.

Written By
Kannada Picchar

Leave a Reply

Your email address will not be published. Required fields are marked *